ಟೋರಸ್ ಲಾರಿಯಲ್ಲಿ ಸಾಗಿಸುತ್ತಿದ್ದ ಹೊಯ್ಗೆ ವಶ: ಚಾಲಕ ಪರಾರಿ

0
1617

ಉಪ್ಪಳ: ಕರ್ನಾಟಕದಿಂದ ಒಳದಾರಿಗಳ ಮೂಲಕ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟೋರಸ್ ಲಾರಿಯನ್ನು ಕಂದಾಯ ಅಧಿಕಾರಿಗಳು ಇಂದು ಬೆಳಿಗ್ಗೆ ವಶಪಡಿಸಿದ್ದಾರೆ. ಅಧಿಕಾರಿಗಳನ್ನು ಕಂಡು ಲಾರಿಯಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ. ಒಳದಾರಿಗಳ ಮೂಲಕ ವ್ಯಾಪಕವಾಗಿ ಅನಧಿಕೃತ  ಹೊಯ್ಗೆ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಕಂದಾಯ ಅಧಿಕಾರಿಗಳು ಇಂದು ಬೆಳಿಗ್ಗೆ ಮೊರತ್ತಣೆಯಲ್ಲಿ ಕಾದು ನಿಂತಿದ್ದ ವೇಳೆ ಹೊಯ್ಗೆ ಲಾರಿ ಆಗಮಿಸಿದೆ. ಅಡಿಶನಲ್ ತಹಶೀಲ್ದಾರ್ ಶಶಿಧರ ಶೆಟ್ಟಿ, ಡೆಪ್ಯುಟಿ ತಹಶೀಲ್ದಾರ್ ದೇವದಾಸ್, ಉದಯ ಕುಮಾರ್, ಕುಲಶೇರನ್, ಸಚಿನ್, ಉಣ್ಣಿ, ಚಂದ್ರಶೇಖರ ಎಂಬಿವರ ನೇತೃತ್ವದಲ್ಲಿ ಲಾರಿ ವಶಪಡಿಸಲಾಗಿದೆ.

NO COMMENTS

LEAVE A REPLY