ಮನೆಯಿಂದ ಒಂದು ಲಕ್ಷ ರೂ. ಕಳವು

0
2082

ಕಾಸರಗೋಡು: ಮನೆಗೆ ಕಳ್ಳರು ನುಗ್ಗಿ ಒಂದು ಲಕ್ಷ ರೂ. ಕಳವುಗೈದ ಘಟನೆ ನಡೆದಿದೆ. ಕೊಳತ್ತೂರಿಗೆ ಸಮೀಪದ ಕರಿಪಾಡಗದ ಮಾಲಿಂಗ ಮಣಿಯಾಣಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಮೊನ್ನೆ ಮನೆಯವರು  ಬಾಗಿಲು ಮುಚ್ಚಿ ಅಲ್ಲೇ ಪಕ್ಕದಲ್ಲಿರುವ ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದರು.  ಈ ವೇಳೆ ಕಳವು ನಡೆದಿರಬಹದೆಂದು ಶಂಕಿಸಲಾಗುತ್ತಿದೆ. ತೋಟದಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೂಲಿ ನೀಡಲೆಂದು ಮಾಲಿಂಗ ಮಣಿಯಾಣಿಯವರು ನಿನ್ನೆ ಮನೆಯಲ್ಲಿರುವ ಹಣ ತೆಗೆಯಲು ಬಂದಾಗಲೇ ಅದು ಕಳವು ಹೋದ ವಿಷಯ ಅವರ ಗಮನಕ್ಕೆ ಬಂದಿದೆ.

ಮಾಲಿಂಗ ಮಣಿಯಾಣಿಯವರು ಹೊಸ ಮನೆಯೊಂದನ್ನು ನಿರ್ಮಿಸುತ್ತಿದ್ದು ಅದಕ್ಕಾಗಿ ಅಡಿಕೆ ಮಾರಿ  ಸಂಗ್ರಹಿಸಲಾಗಿದ್ದ ಹಣ ಈ ರೀತಿ ಕಳವು ಹೋಗಿದೆ.  ಈ ಬಗ್ಗೆ ಮಾಲಿಂಗ ಮಣಿಯಾಣಿ ನೀಡಿದ ದೂರಿನಂತೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆದೂರು ಸಿ.ಐ ಸಿ.ಬಿ ಮ್ಯಾಥ್ಯೂ, ಬೇಡಡ್ಕ ಹೆಚ್ಚುವರಿ ಎಸ್.ಐ ಎ. ಮೂಸಾನ್‌ರ ನೇತತ್ವದ ಪೊಲೀಸರು ಕಳವು ನಡೆದ ಮನೆ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.

NO COMMENTS

LEAVE A REPLY