ಹೊಯ್ಗೆ ಬೇಟೆ ವೇಳೆ ಅಧಿಕಾರಿಗಳನ್ನು ಅಪಾಯದಲ್ಲಿ ಸಿಲುಕಿಸಲು ಯತ್ನ

0
345

ಕುಂಬಳೆ: ಅನಧಿಕೃತ ಹೊಯ್ಗೆ ಸಾಗಾಟ ಪತ್ತೆಹಚ್ಚಲು ತಲುಪಿದ ಅಧಿಕಾರಿಗಳನ್ನು ಅಪಾಯದಲ್ಲಿ ಸಿಲುಕಿಸಲು ಯತ್ನ ನಡೆದಿದೆ.  ನಿನ್ನೆ ಸಂಜೆ ಬಂದ್ಯೋಡು ಅಡ್ಕ ಬಳಿಯ ಮಡಂದೂರಿನಲ್ಲಿ ಘಟನೆ ನಡೆದಿದೆ. ಶಿರಿಯ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿರುವ ವಿಷಯ ತಿಳಿದು ಮಂಜೇಶ್ವರ ಅಡಿಶನಲ್ ತಹಶೀಲ್ದಾರ್ ಶಶಿಧರ ಶೆಟ್ಟಿ, ಹೆಡ್  ಕ್ವಾರ್ಟರ್ಸ್‌ನ ಡೆಪ್ಯುಟಿ ತಹಶೀಲ್ದಾರ್‌ಗಳಾದ ಉದಯ ಕುಮಾರ್, ದೇವದಾಸ್ ಎಂಬಿವರು ಹೊಯ್ಗೆ ಬೇಟೆಗಿಳಿದಿದ್ದರು. ಅಧಿಕಾರಿಗಳು ಕಯ್ಯಾರು ಗ್ರಾಮ ಕಚೇರಿ ಬಳಿಗೆ ತಲುಪಿದಾಗ ಹೊಯ್ಗೆ ಹೇರಿದ ಲಾರಿ ತಲುಪಿದೆ. ಅಧಿಕಾರಿಗಳನ್ನು ಕಂಡೊಡನೆ ಟಿಪ್ಪರ್ ಲಾರಿ ಅಮಿತ  ವೇಗದಲ್ಲಿ ಸಂಚರಿಸಿದ್ದು ಅಲ್ಪ ದೂರ ಸಾಗಿದಾಗ ಲಾರಿಯನ್ನು ದಿಢೀರನೆ ನಿಲ್ಲಿಸಿ ಹೊಯ್ಗೆಯನ್ನು ರಸ್ತೆಗೆ ಸುರಿಯಲು  ತಂಡ ಯತ್ನಿಸಿದೆ. ಈ ವೇಳೆ ಅಧಿಕಾ ರಿಗಳ ವಾಹನ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದು ನಿಂತಿದೆ. ಅಷ್ಟರಲ್ಲಿ ಲಾರಿ ಪರಾರಿಯಾಗಿದೆ.  ಈ ಬಗ್ಗೆ ಕುಂ ಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY