ಕಾಶೀಮಠಾಧೀಶರ ದಿಗ್ವಿಜಯ ಮಹೋತ್ಸವ ಕಾಞಂಗಾಡ್ನಲ್ಲಿ ಬೃಹತ್ ಶೋಭಾಯಾತ್ರೆ

0
58

ಹೊಸದುರ್ಗ: ಕಾಶೀಮಠಾಧೀಶ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವದ ಪ್ರಯುಕ್ತ ನಿನ್ನೆ ಸಂಜೆ ಆರಂಭಗೊಂಡ ಬೃಹತ್ ಶೋಭಾಯಾತ್ರೆ ಇಂದು ಮುಂಜಾನೆ ೩ ಗಂಟೆಗೆ ಸಂಪನ್ನಗೊಂಡಿತು.

ಕಾಞಂಗಾಡ್ ಶ್ರೀ ಲಕ್ಷ್ಮೀ ವೆಂಕ ಟೇಶ ಕ್ಷೇತ್ರದಲ್ಲಿ  ನಡೆಯುತ್ತಿ ರುವ ಸ್ವಾಮೀಜಿಯವರ ಚಾತುರ್ಮಾ ಸ್ಯ ವ್ರತಾ ಚರಣೆಯ ಅಂಗವಾಗಿ ದಿಗ್ವಿ ಜಯ ಮಹೋತ್ಸವ ನಡೆಯುತ್ತಿದೆ. ನಿನ್ನೆ ಸಂಜೆ ೬ ಗಂಟೆಗೆ ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಹೊರಟ ಶೋಭಾಯಾತ್ರೆ ಕೋಟಚ್ಚೇರಿ ಟ್ರಾಫಿಕ್ ನಲ್ಲಿ ಪ್ರದಕ್ಷಿಣೆಯ ಬಳಿಕ  ಇಂದು ಮುಂಜಾನೆ ಶ್ರೀ ಲಕ್ಷ್ಮೀ ವೆಂಕಟೇಶ ಕ್ಷೇತ್ರಕ್ಕೆ ತಲುಪಿದೆ. ಆನೆಗಳು, ವಾದ್ಯಮೇಳ, ವಿವಿಧ ವೇಷಗಳು ಒಳಗೊಂಡ ಶೋಭಾ ಯಾತ್ರೆಯಲ್ಲಿ ಸ್ವಾಮೀಜಿಯವರನ್ನು ಕುಳ್ಳಿರಿಸಿ ಮೆರವಣಿಗೆ ನಡೆಸಲಾ ಯಿತು. ಸ್ವಾಮೀಜಿಯವರನ್ನು ಸ್ವಾಗತಿಸಲು  ಸಾವಿರಾರು ಮಂದಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು.

NO COMMENTS

LEAVE A REPLY