ಸಿಪಿಎಂನಲ್ಲಿ ವಿವಾದ: ಬಯಲುಶೌಚಮುಕ್ತ ಯೋಜನೆಯಲ್ಲಿ ಜಲನಿಧಿ ಕಮಿಶನರ್ಗೆ ದಿಗ್ಬಂಧನ; ೫ ಮಂದಿ ವಿರುದ್ಧ ಕೇಸು

0
27

ಅಡೂರು: ಸಂಪೂರ್ಣ ಬಯಲು ಶೌಚ ಮುಕ್ತ ಯೋಜನೆ ಯಂತೆ ದೇಲಂಪಾಡಿ ಪಂಚಾಯತ್‌ನಲ್ಲಿ ಜ್ಯಾರಿಗೊಳಿಸಿದ ಯೋಜನೆಯಲ್ಲಿ ವಿವಾದ ಉಂಟಾಗಿದೆ. ಪ್ರಕರಣದಲ್ಲಿ ಸಿಪಿಎಂ ಬೇಡಗಂ ಏರಿಯಾ ಸಮಿತಿ ಸದಸ್ಯ, ಕುತ್ತಿಕೋಲ್ ಪಂ. ಸದಸ್ಯನಾದ ಕೆ. ಎನ್. ರಾಜರ ಪುತ್ರಿ, ಜಲನಿಧಿ ಪ್ರೋಜೆಕ್ಟ್ ಕಮಿಶನರ್ ಅಂಜಲಿ ನೀಡಿದ ದೂರಿನಂತೆ ೫ ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ.

ಪಂಚಾಯತ್‌ನಲ್ಲಿ  ಜಲನಿಧಿ ಪ್ರೋಜೆಕ್ಟ್ ಮೂಲಕ ಸಂಪೂರ್ಣ ಬಯಲು ಶೌಚಮುಕ್ತ ಯೋಜನೆ ಜ್ಯಾರಿಗೊಳಿಸಲಾಗಿತ್ತು. ಈ ಯೋಜನೆ ಯಂತೆ ಪರಿಶಿಷ್ಟ ವಿಭಾಗಕ್ಕೊಳಪಟ್ಟ ಅಡೂರು ಮಣಿಯೂರಿನ ಉಕ್ರ ಎಂಬವರಿಗೆ ಸೌಲಭ್ಯ ನಿಷೇಧಿಸಲಾಗಿ ದೆಯೆಂದು ಆರೋಪಿಸಿ ಜಲನಿಧಿ ಕಮಿಷನರ್‌ರನ್ನು ಪಂಚಾಯತ್ ಕಚೇರಿಯಲ್ಲಿ ದಿಗ್ಬಂಧನ ನಡೆಸಿ ಬೈದಿರುವುದಾಗಿ ದೂರಲಾಗಿದೆ. ಫಲಾನುಭವಿ ಪಟ್ಟಿಯಲ್ಲಿ ಉಕ್ರರ ಹೆಸರಿದ್ದು, ಇದರಂತೆ ಪಾಯಿಖಾನೆ ನಿರ್ಮಿಸಿದ್ದರು. ಆದರೆ ಬಳಿಕ ಇದರ ಹಣಕ್ಕಾಗಿ ತೆರಳಿದಾಗ ಹೆಸರು ಪಟ್ಟಿಯಲ್ಲಿಲ್ಲ ಎಂಬ ಕಾರಣದಿಂದ ಉಕ್ರರಿಗೆ ಹಣ ಲಭಿಸಿರಲಿಲ್ಲ. ಇದನ್ನು ವಿರೋಧಿಸಿ ಪಂಚಾಯತ್ ಸ್ಥಾಯಿ ಸಮಿತಿ ಅಧಕ್ಷ, ಸಿಪಿಎಂ ಪಾಂಡಿ ಲೋಕಲ್ ಸಮಿತಿ ಸದಸ್ಯನಾದ ಕೆ. ರತನ್ ಕುಮಾರ್ ನಾಯ್ಕ್, ನಾಗೇಶ್, ಪುರುಷೋತ್ತಮ, ಜಯಂತಿ ಸುಶೀಲ ಎಂಬಿವರ ನೇತೃತ್ವದಲ್ಲಿ ಜಲನಿಧಿ ಕಮಿಶನರ್ ಆದ ಅಂಜಲಿ ಯನ್ನು ಪಂಚಾಯತ್ ಕಚೇರಿಯಲ್ಲಿ ತಡೆಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಅಂಜಲಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಯ ಆದೇಶದಂತೆ ಆದೂರು ಪೊಲೀಸರು ಸಿಪಿಎಂ ಕಾರ್ಯಕರ್ತರಾದ ೫ ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಅನ್ಯಾಯವಾಗಿ ತಡೆದು ನಿಲ್ಲಿಸು ವುದು, ಕರ್ತವ್ಯಕ್ಕೆ ತಡೆ ಮಾಡುವುದು ಮೊದಲಾದ ಕಾಯ್ದೆಗಳಂತೆ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಇದು ಈಗ  ಸಿಪಿಎಂನಲ್ಲಿ ವಿವಾದ ಹುಟ್ಟು ಹಾಕಿದೆ. ಈ ಮಧ್ಯೆ ಉಕ್ರರಿಗೆ ಯೋಜನೆ  ಜ್ಯಾರಿಗೆ ಬರುವುದಕ್ಕಿಂತಲೂ ಮೊದಲೇ ಪಾಯಿಖಾನೆ ನಿರ್ಮಿಸಿರುವುದರಿಂದ ಅವರಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಜಲನಿಧಿ ಪ್ರೋಜೆಕ್ಟ್ ಅಧಿಕಾರಿಗಳು ತಿಳಿಸುತ್ತಾರೆ.

NO COMMENTS

LEAVE A REPLY