ಹೊಯ್ಗೆ ಸಾಗಾಟಗಾರರ ವಾಹನ ನಾಪತ್ತೆ ಘರ್ಷಣೆಯಲ್ಲಿ ಓರ್ವನಿಗೆ ಇರಿತ

0
30

ಕಾಸರಗೋಡು: ಹೊಯ್ಗೆ ಸಾಗಾಟಕ್ಕೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಘರ್ಷಣೆಯಲ್ಲಿ ಪರ್ಯಾವಸಾನಗೊಂಡು ಓರ್ವನಿಗೆ ಇರಿತ ಉಂಟಾಗಿದೆ. ಬೇಕಲ ಕೋಟೆಕುನ್ನು ನಿವಾಸಿ ಬಾದುಶ(೩೦) ಎಂಬವರಿಗೆ ಇರಿತವುಂಟಾಗಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ಬೇಕಲದಲ್ಲಿ ಘಟನೆ  ನಡೆದಿದೆ. ಹೊಯ್ಗೆ ಸಾಗಾಟಗಾರರ  ಬೈಕ್ ಕಾಣೆಯಾದ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿತ್ತು. ಈ ವೇಳೆ ಬಾದುಶರಿಗೆ ತಂಡವೊಂದು ಇರಿದಿದೆ. ಬೈಕ್ ನಾಪತ್ತೆಯಾದ ವಿಷಯಕ್ಕೆ ಸಂಬಂಧಿಸಿ ಸಾದಿಕ್, ಜುನೈದ್ ಎಂಬಿವರೊಂದಿಗೆ ವಾಗ್ವಾದ  ಉಂಟಾಗಿದೆ. ಬಳಿಕ  ಘರ್ಷಣೆ ವೇಳೆ ಅಶ್ರಫ್ ಯಾನೆ ಕತ್ತಿ ಅಶ್ರಫ್ ಎಂಬಾತನಿಗೆ ಇಬ್ಬರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಶ್ರಫ್ ಸ್ಥಳಕ್ಕೆ ತಲುಪಿ ಬಾದುಶನೊಂದಿಗೆ ವಾಗ್ವಾದಕ್ಕಿಳಿದು ಬಳಿಕ ಸೊಂಟದಲ್ಲಿ ಬಚ್ಚಿಟ್ಟುಕೊಂಡಿದ್ದ ಕತ್ತಿಯಿಂದ ಬಾದುಶರಿಗೆ ಇರಿದಿರು ವುದಾಗಿ ದೂರಲಾಗಿದೆ. ಘಟನೆ ಬಳಿಕ ಅಶ್ರಫ್ ತಲೆಮರೆಸಿಕೊಂಡಿದ್ದು ಸಾದಿಕ್ ಹಾಗೂ ಜುನೈದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವಿಷಯ ತಿಳಿದು ತಲುಪಿದ ಬೇಕಲ ಸಿ.ಐ ವಿ.ಕೆ. ವಿಶ್ವಂಭರನ್ ನಾಯರ್ ಈ ಇಬ್ಬರನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಬಾದುಶರ ಕುತ್ತಿಗೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹದ್ದಾದ್ ನಗರ ಎಂಬಲ್ಲಿನ ಕ್ವಾರ್ಟರ್ಸ್‌ನಲ್ಲಿ ಕತ್ತಿ ಅಶ್ರಫ್ ವಾಸಿಸುತ್ತಿದ್ದು ಅಲ್ಲಿಗೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

NO COMMENTS

LEAVE A REPLY