ಹತ್ಯೆಯತ್ನ: ತಲೆಮರೆಸಿಕೊಂಡ ಆರೋಪಿ ೮ ವರ್ಷ ಬಳಿಕ ಸೆರೆ

0
35

ಕಾಸರಗೋಡು: ನರಹತ್ಯೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಯುವಕನನ್ನು ೮ ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ನುಳ್ಳಿಪ್ಪಾಡಿ ರಿಫಾಯಿ ಮಂಜಿಲ್‌ನ ರಾಬಿಯತ್ (೩೦) ಎಂಬಾತ ಸೆರೆ ಗೀಡಾದ ವ್ಯಕ್ತಿ. ೨೦೦೮ ನವೆಂಬರ್‌ನಲ್ಲಿ ನುಳ್ಳಿಪ್ಪಾಡಿಯ ಇಬ್ರಾಹಿಂ ಎಂಬವರನ್ನು ತಲೆಗೆ ಹೊಡೆದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾದ ಈತನನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ಇದರಿಂದ  ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಲಾಗಿತ್ತು. ಈತನನ್ನು ಇದೀಗ ಕಾಸರಗೋಡು ಸಿ.ಐ ಅಬ್ದುಲ್ ರಹ್ಮಾನ್ ನೇತೃತ್ವದ ಪೊಲೀಸರು ನೀಲೇಶ್ವರ ವೆಳ್ಳಿಕೋತ್ತ್‌ನಿಂದ ಬಂಧಿಸಿದ್ದಾರೆ.

NO COMMENTS

LEAVE A REPLY