ರೇಶನ್ ಸಂದಿಗ್ಧತೆ: ವಿವಿಧೆಡೆ ಬಿಜೆಪಿಯಿಂದ ರೇಶನ್ ಅಂಗಡಿ ಮುಂದೆ ಪ್ರತಿಭಟನೆ

0
337

ಉಪ್ಪಳ: ರಾಜ್ಯದಲ್ಲಿ ಎಡರಂಗ ಸರಕಾರ ಆಹಾರ ಸುರಕ್ಷಾ ನಿಯಮವನ್ನು ಬುಡಮೇಲುಗೊಳಿಸುತ್ತಿದೆಯೆಂದು ಆರೋಪಿಸಿ ಬಿಜೆಪಿ ಇಂದು ರೇಶನ್ ಅಂಗಡಿಗಳಿಗೆ ಮಾರ್ಚ್ ಹಾಗೂ ಧರಣಿ ನಡೆಸುತ್ತಿದೆ. ಇದರಿಂದಾಗಿ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಇಂದು ಬೆಳಿಗ್ಗೆ ಬಂದ್ಯೋಡಿನ ರೇಶನ್ ಅಂಗಡಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು. ಧರಣಿಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ಮಂಜೇಶ್ವರ ಮಂಡಲ ಅಧ್ಯಕ್ಷ ಕೆ.ಟಿ. ಮುನೀರ್ ಉದ್ಘಾಟಿಸಿ ದರು. ಬಿಜೆಪಿ ಪಂ. ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಹೇರೂರು ಅಧ್ಯಕ್ಷತೆ ವಹಿಸಿದರು. ನೇತಾರರಾದ ವಲ್ಸರಾಜ್, ವಿಜಯ ರೈ, ಲೋಹಿತ್ ಕುಮಾರ್, ಸಂದೀಪ್ ಶೆಟ್ಟಿ, ಬಾಲಕೃಷ್ಣ ವೀರನಗರ, ಬಾಲಕೃಷ್ಣ ಅಂಬಾರು, ಸೀತಾರಾಮ ಭಂಡಾರಿ ಮೊದಲಾದವರು ನೇತೃತ್ವ ನೀಡಿದರು.

ಸೀತಾಂಗೋಳಿ:ಬಿಜೆಪಿ ನೇತೃತ್ವದಲ್ಲಿ ಸೀತಾಂಗೋಳಿಯಲ್ಲಿರುವ ರೇಶನ್ ಅಂಗಡಿ ಮುಂದೆ ನಡೆದ ಧರಣಿ ಸತ್ಯಾಗ್ರಹದಲ್ಲಿ ನೇತಾರರಾದ ಜಯಂತ ಪಾಟಾಳಿ, ಬಿ.ಎನ್. ಪದ್ಮನಾಭ, ಬಾಲಸುಬ್ರಹ್ಮಣ್ಯ ಭಟ್, ಪುಷ್ಪಾ ನಾರಾಯಣ, ಸಾಗರ್ ಮೊದಲಾದವರು ನೇತೃತ್ವ ನೀಡಿದರು.

NO COMMENTS

LEAVE A REPLY