ಉಪ್ಪಳ: ಕುಬಣೂರು ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ೧೧,೦೦೦ ರೂ. ಹಾಗೂ ರೋಲ್ಡ್ ಗೋಲ್ಡ್‌ಗಳೊಂದಿಗೆ ಪರಾರಿ ಯಾಗಿ ದ್ದಾರೆ. ಕುಬಣೂರು ದೇರ್ಜಾಲ್ ನಿವಾಸಿ ಮೊಯ್ದೀನ್‌ರ ಮನೆಯಿಂದ ಕಳವು ನಡೆದಿದೆ. ಗಲ್ಫ್ ನಲ್ಲಿದ್ದ ಮೊಯ್ದೀನ್ ಒಂದು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು. ಕಳೆದ ಶನಿವಾರ ಕುಟುಂಬ ಸಹಿತ ಮೈಸೂರಿಗೆ ತೆರಳಿದ ಅವರು ನಿನ್ನೆ ರಾತ್ರಿ ಮನೆಗೆ ಆಗಮಿಸಿದಾಗ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಮನೆಯ ಎರಡು ಬಾಗಿಲುಗಳು ಮುರಿದ ಸ್ಥಿತಿಯಲ್ಲಿದೆ. ಈಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ.