ಮಹಾತ್ಮಾ ಮಾದರಿ ಬಡ್ಸ್ ಸ್ಕೂಲ್ ನಾಳೆ ಮುಖ್ಯಮಂತ್ರಿಯಿಂದ ಉದ್ಘಾಟನೆ

0
42

ಕಾಸರಗೋಡು: ದೇಶಕ್ಕೆ ಮಾದರಿ ಯಾಗುವ ರೀತಿಯಲ್ಲಿ ಕೇರಳದ ಮೊದಲ ಮಾದರಿ ಬಡ್ಸ್‌ಸ್ಕೂಲ್‌ನ್ನು ಜಿಲ್ಲೆಯ ಪೆರಿಯಾದಲ್ಲಿ ಸ್ಥಾಪಿಸಲಾಗಿದೆ. ನಾಳೆ ಬೆಳಿಗ್ಗೆ ೧೧ ಗಂಟೆಗೆ ಉದುಮ ಶಾಸಕ ಕೆ. ಕುಂಞಿ ರಾಮನ್‌ರ ಅಧ್ಯಕ್ಷತೆಯಲ್ಲಿ ಜರಗುವ  ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಮಾದರಿ ಬಡ್ಸ್ ಸ್ಕೂಲನ್ನು ಉದ್ಘಾಟಿಸುವರು ಎಂದು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜೀವನ್‌ಬಾಬು ಕೆ. ತಿಳಿಸಿದ್ದಾರೆ.

ಬಡ್ಸ್ ಶಾಲೆಗೆ ಪೂರೈಸಲಾದ ಉಪ ಕರಣಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್ ವಿತರಿಸುವರು. ಸರಕಾರಕ್ಕೆ ಸಲ್ಲಿಸಲಾಗುವ ಸ್ನೇಹಕೂಡು (ಗೂಡು) ಕಾರ್ಯ ನಿರ್ವಹಣಾ ರೂಪು ರೇಷೆಯನ್ನು ರಾಜ್ಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಖಾತೆ ಸಚಿವೆ ಕೆ.ಕೆ. ಶೈಲಜ ಪಡೆದುಕೊಳ್ಳುವರು.

ಸಂಸದ ಪಿ. ಕರುಣಾಕರನ್ ಮುಖ್ಯ ಭಾಷಣ ಮಾಡುವರು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಸೇರಿದಂತೆ ಹಲವರು ಶುಭಾಶಂಸನೆ ಗೈಯುವರು. ವಿಕಲಚೇತನರಾದ ಮಕ್ಕಳ ಸಮಗ್ರ ತರಬೇತಿಗಾಗಿ ಸೆನ್ಸಾರಿಟಿ ರೂಮ್, ರಿಹಾಬಿಲಿಟೇಷನ್ ಸೆಂಟರ್, ಸೆನ್ಸಾರಿಟಿ ಗಾರ್ಡನ್‌ಗಳನ್ನು ಈ ಶಾಲೆಯಲ್ಲಿ ಸಜ್ಜೀಕರಿಸಲಾಗಿದೆ. ಅತ್ಯುತ್ತಮ ರೀತಿಯ ಅಧ್ಯಯನ ಮಾನಸಿಕೋಲ್ಲಾಸ ಸೌಕರ್ಯಗಳನ್ನೊಳಗೊಂಡ ತರಗತಿ ಕೊಠಡಿಗಳು ಮತ್ತು ಪರಿಸರಗಳನ್ನು ಸೃಷ್ಟಿಸಲಾಗಿದೆ.

ಪುಲ್ಲೂರು -ಪೆರಿಯಾ  ಪಂಚಾಯತ್ ಅಧ್ಯಕ್ಷೆ ಶಾರದ ಎಸ್ ನಾಯರ್, ಎಡಿಎಂ ಕೆ. ಅಂಬುಜಾಕ್ಷನ್, ಎಂಡೋಸಲ್ಫಾನ್ ಸ್ಪೆಷಲ್ ಸೆಲ್‌ನ ಉಪ ಜಿಲ್ಲಾಧಿಕಾರಿ ಕೆ.ಆರ್. ರವೀಂದ್ರನ್, ಡಾ. ಬಿ. ಮುಹ ಮ್ಮದ್ ಆಶೀಲ್, ಜಿಲ್ಲಾ ವಾರ್ತಾಧಿಕಾರಿ ಸುಗದನ್ ಇ.ವಿ, ಎನ್‌ಎಚ್‌ಎಂ ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್ ಡಾ. ರಮಣ್, ಸ್ವಾತಿ ವಾಮನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

NO COMMENTS

LEAVE A REPLY