ಕಾಸರಗೋಡು ಸಹಿತ ರಾಜ್ಯದಲ್ಲಿ ಹತ್ತು ಇಕೋ- ಟೂರಿಸಂ ಕೇಂದ್ರ

0
43

ಕಾಸರಗೋಡು: ಕಾಸರಗೋಡು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹತ್ತು ಇಕೋ ಟೂರಿಸಂ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಇಲಾಖೆ ತೀರ್ಮಾನಿಸಿದೆ.

ಇದರಂತೆ ಕಾಸರಗೋಡು ಜಿಲ್ಲೆಯ ಪರಪ್ಪ- ರಾಣಿಪುರ- ಕೊಟ್ಟಿಯಾರು, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಕೋ ಟೂರಿಸಂ ಸೇವೆ ಆರಂಭಿಸಲಾಗುವುದು.

ಇಂತಹ ಪ್ರವಾಸಿ ಕೇಂದ್ರಗಳಲ್ಲಿ ವಾಸ ಸೌಕರ್ಯಗಳನ್ನೂ ಏರ್ಪ ಡಿಸಲಾಗುವುದು. ಅದಕ್ಕಾಗಿ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಜಂಟಿ ಸಮಿತಿಗಳಿಗೂ ರೂಪು ನೀಡಲಾಗುವುದು. ಅರಣ್ಯ ಮತ್ತು ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದ ರೀತಿಯಲ್ಲಿ . ರಾಜ್ಯದ ಶೇ ೬೦ರಷ್ಟು ಅರಣ್ಯ ವಲಯಗಳಲ್ಲಿ ಈಗಾಗಲೇ ಪ್ರವಾಸಿಯೋಜನೆಗಳನ್ನು ಜ್ಯಾರಿಗೊಳಿಸಲಾಗಿದೆ. ಅದೇ ರೀತಿ

ರಾಜ್ಯದ ಪ್ರವಾಸಿ ಯೋಜನೆಗೆ ಕೇಂದ್ರ ಸರಕಾರದಿಂದಲೂ ಅಗತ್ಯದ ಆರ್ಥಿಕ ಮತ್ತಿತರ ನೆರವು ಲಭಿಸುತ್ತಿದೆ. ಅದನ್ನು ಸಂಪೂರ್ಣವಾಗಿ ಸದು ಪಯೋಗಪಡಿಸಿಕೊಂಡು ಸಮರ್ಪಕ ರೀತಿಯಲ್ಲಿ ಯೋಜನೆ ಜ್ಯಾರಿ ಗೊಳಿಸುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ.

NO COMMENTS

LEAVE A REPLY