‘ಪುಲಿಮುರುಗನ್’ ಇಂಟರ್ನೆಟ್ನಲ್ಲಿ ಸೋರಿಕೆ ಡೌನ್ಲೋಡ್ ಮಾಡಿದ ೬೧ ಮಂದಿಗಾಗಿ ಶೋಧ

0
940

ಕಾಸರಗೋಡು: ಮಲೆಯಾಳ ಸಿನಿಮಾ ರಂಗದ ಗಳಿಕೆಯಲ್ಲಿ ಇದೇ ಪ್ರಥಮವಾಗಿ ೧೦೦ ಕೋಟಿರೂ. ಕ್ಲಬ್‌ಗೇರಿ ಹೊಸ ಇತಿಹಾಸ ನಿರ್ಮಿಸಿದ ರಾಜ್ಯದ ಸಿನಿಮಾ ಥಿಯೇಟರ್ ಗಳಲ್ಲಿ  ಪ್ರೇಕ್ಷಕರು ಮುಗಿಬಿದ್ದಿರುವ ಮೇರುನಟ ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಬ್ರಹ್ಮಾಂಡ ಚಿತ್ರವಾದ ‘ಪುಲಿಮುರುಗನ್’ ಅಕ್ರಮವಾಗಿ ಇಂಟರ್‌ನೆಟ್ ಮೂಲಕ ಸೋರಿಕೆ ನಡೆಸಲಾಗಿದೆ.

೨೫ ಕೋಟಿ ರೂ. ವ್ಯಯಿಸಿ ಅದ್ದೂರು ವೆಚ್ಚದಲ್ಲಿ ನಿರ್ಮಿಸಲಾದ ಪುಲಿ ಮುರುಗನ್ ಚಿತ್ರ ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗದ ರೀತಿಯಲ್ಲಿ ಅಗತ್ಯದ ಎಲ್ಲಾ ಭದ್ರತಾ ಮಾನದಂಡವನ್ನು ಪಾಲಿಸಿಕೊಂಡು  ೨೫ ದಿನಗಳ ಹಿಂದೆ ಬಿಡುಗಡೆಮಾಡಲಾಗಿತ್ತು. ಚಿತ್ರ ಬಿಡುಗಡೆಯಾದ ದಿನದಿಂದಲೇ ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಜನಪ್ರವಾಹವೇ ಹರಿದುಬಂದು ಹೌಸ್‌ಫುಲ್ ಪ್ರದರ್ಶನದೊಂದಿಗೆ ಜೈತ್ರಯಾತ್ರೆ ಮುಂದುವರಿಸುತ್ತಿರುವ  ಈ ಚಿತ್ರವನ್ನು ಇಂಟರ್‌ನೆಟ್‌ನಲ್ಲಿ ಸೋರಿಕೆ ನಡೆಸಿದವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ಈ ಚಿತ್ರವನ್ನು ೬೧ ಮಂದಿ ಈಗಾಗಲೇ ಡೌನ್‌ಲೋಡ್ ಮಾಡಿರುವು ದಾಗಿ ಪೊಲೀಸ್ ತನಿಖೆಯಲ್ಲಿ ಪತ್ತೆಹಚ್ಚ ಲಾಗಿದ್ದು, ಡೌನ್‌ಲೋಡ್ ಮಾಡಿದವರ ಐಪಿ ವಿಳಾಸ ಪೊಲೀಸರಿಗೆ ಈಗಾಗಲೇ ಲಭಿಸಿದ್ದು, ಅದರ ಆದಾರದಲ್ಲಿ  ಅವರನ್ನು ಪತ್ತೆಹಚ್ಚಿ  ಕಾನೂನುಪ್ರಕಾರ ಕೇಸು ದಾಖಲಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಸಿನಿಮಾ ಪ್ರದರ್ಶನ ವೇಳೆ ಚಿತ್ರೀಕರಿಸಿ ಬಳಿಕ ಅದನ್ನು ಇಂಟರನೆಟ್ ಮೂಲಕ ಸೋರಿಕೆ ನಡೆಸಲಾಗಿದೆಯೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.  ಇಂಟರ್‌ನೆಟ್‌ನಲ್ಲಿ  ಈಚಿತ್ರ ಪ್ರತ್ಯಕ್ಷಗೊಂಡ ಬೆನ್ನಲ್ಲೇ ಕೇರಳ ಪೊಲೀಸ್ ಸೈಬರ್ ಡ್ಯಾಮ್ ತಕ್ಷಣ ಮಧ್ಯಪ್ರವೇಶಿಸಿ ಇಂಟರ್‌ನೆಟ್‌ನಿಂದ ಈ ಚಿತ್ರದ ಪ್ರದರ್ಶನ ಮಾತ್ರವಲ್ಲ ಅದರ ಡೌನ್‌ಲೋಡ್‌ಗೈಯ್ಯುವಿಕೆಯನ್ನು  ತಡೆದಿದೆ. ಇಂಟರ್‌ನೆಟ್‌ನಿಂದ ಆ ಚಿತ್ರವನ್ನು ಪೂರ್ಣವಾಗಿ ತೆರವುಗೊಳಿಸಿ ಆಮೂಲಕ ನಿರ್ಮಾಪಕರಿಗುಂಟಾಗ ಬಹುದಾದ ಭಾರೀ ಆರ್ಥಿಕ ನಷ್ಟವನ್ನು ತಪ್ಪಿಸುವಂತೆ ಮಾಡಿದೆ.

ತಮಿಳಿನ ಟೊರೆಂಟೋ, ರೋವರ್ ಸೇರಿದಂತೆ ನಾಲ್ಕು ಇಂಟರ್‌ನೆಟ್‌ನಲ್ಲಿ ನಿನ್ನೆ ರಾತ್ರಿ ದಿಢೀರ್ ಪುಲಿಮುರುಗನ್ ಚಿತ್ರ ಪ್ರತ್ಯಕ್ಷಗೊಂಡಿದೆ. ಅದನ್ನು ಗಮನಿಸಿದ ಪೊಲೀಸರು ಸೈಬರ್ ಡ್ಯಾಮ್ ತಕ್ಷಣ ತಡೆದಿದೆ.

ಹೀಗೆ ಇಂಟರ್‌ನೆಟ್‌ನಲ್ಲಿ ಅಕ್ರಮವಾಗಿ ಈ ಚಿತ್ರ ಪ್ರದರ್ಶಿಸಿದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ. ವಿದೇಶದಿಂದ ಈ ಚಿತ್ರವನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡಲಾಗಿದೆಯೆಂದೂ ಸೈಬರ್ ಸೆಲ್ ಪೊಲೀಸರು ತಿಳಿಸಿದ್ದಾರೆ.

 

NO COMMENTS

LEAVE A REPLY