ಕಳವು ದರೋಡೆ ಗುರಿಯೊಂದಿಗೆ ನಾಡಿಗಿಳಿದ ಬೇಟೆ ತಂಡ: ಪೊಲೀಸರಿಂದ ಮುನ್ಸೂಚನೆ

0
44

ಕುಂಬಳೆ: ಗುಜರಿ ಸಾಮಗ್ರಿಗಳನ್ನು ಹೆಕ್ಕಲೆಂಬ ನೆಪದಲ್ಲಿ ವಿವಿಧೆಡೆ ಸುತ್ತಾಡಿ ಮನೆ ಹಾಗೂ ಪರಿಸರದ ಮೇಲೆ ನಿಗಾ ಇರಿಸಿ ಬಳಿಕ ಕಳವು ದರೋಡೆಗೆ ಹೊಂಚು ಹಾಕುವ ಬೇಟೆಗಾರರು ನಾಡಿಗಿಳಿದಿದ್ದಾರೆ. ತಮ್ಮ ಗುರಿಸಾಧಿಸಲು ಜನರನ್ನು ಅಪಾಯಕ್ಕೆಡೆ ಮಾಡಲು ಕೂಡಾ ಈ ತಂಡಗಳು ಮುಂದಾಗುತ್ತಿವೆ. ಆಮೆ ಹಾಗೂ ಮುಂಗುಸಿ ಹಿಡಿಯುವವರೂ ಭಾರೀ ಕಳವು ಗುರಿಯೊಂದಿಗೆ ವಿವಿಧೆಡೆ ತಿರುಗಾಡುತ್ತಿರು ವುದಾಗಿ ಸೂಚನೆ ಲಭಿಸಿದೆ. ಈ ಬೇಟೆಗಾ ರರ ತಂಡದ ಕಳವು ರೀತಿ ಇತರ ಕಳ್ಳರಿಂದ ವ್ಯತ್ಯಸ್ಥವಾದುದಾಗಿದೆ. ಗೋಣಿಚೀಲಗಳೊಂ ದಿಗೆ ವಿವಿಧ ಭಾಗಗಳಲ್ಲಿ ಅಲೆದಾಡುವ ತಂಡ ಗುಜರಿ ಸಾಮಗ್ರಿ ಹೆಕ್ಕುವ ನೆಪದಲ್ಲಿ ಮನೆಗಳ ಮೇಲೆ ನಿಗಾ ಇರಿಸುತ್ತಿವೆ. ಮನೆಯ ಸ್ಥಿತಿಗತಿಗಳನ್ನು ಪೂರ್ಣವಾಗಿ ತಿಳಿದು ರಾತ್ರಿ ವೇಳೆಗಳಲ್ಲಿ ಕಳವಿಗೆ ಮುಂದಾಗುತ್ತಿವೆ. ಆಯುಧಗ ಳೊಂದಿಗೆ ತಲುಪುವ ತಂಡ ಮನೆ ಬಾಗಿಲಿಗೆ ಬಡಿಯುತ್ತಿದ್ದು, ತೆರೆಯದಿದ್ದರೆ ಮೆಟ್ಟಿ ಮುರಿಯುತ್ತವೆ.  ಆಗ ಮನೆಮಂದಿ ಬೊಬ್ಬಿಟ್ಟರೆ ಆಕ್ರಮಿಸಿ ಕೊಲೆಗೈಯ್ಯಲು ಈ ತಂಡಗಳು ಮುಂದಾಗುತ್ತವೆ. ಹಣ ಸಂಪಾ ದನೆಗಾಗಿ ರಸ್ತೆ ಬದಿ ಮಲಗಿರುವ ವರನ್ನು ತರೆಗೆ ಹೊಡೆದು  ಕೊಲೆಗೈಯ್ಯು ವವರೂ ಈ ತಂಡದಲ್ಲಿದ್ದರೆಂದು  ಪೊಲೀ ಸರು ತಿಳಿಸು ತ್ತಿದ್ದಾರೆ. ಆಮೆ, ಮುಂಗುಸಿ ಹಿಡಿಯಲೆಂದು ತಿಳಿಸಿ ನಾಡಿನಲ್ಲಿ ಬೀಡುಬಿಟ್ಟವರ ಬಗ್ಗೆ ತಿಳಿದರೆ ಕೂಡಲೇ ಮಾಹಿತಿ ನೀಡಬೇಕೆಂದೂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY