ಶಶಿಕಲಾ ಟೀಚರ್ ವಿರುದ್ಧ ಪೊಲೀಸ್ ತನಿಖೆ

0
60

ಕಾಸರಗೋಡು: ವಿವಾದ ಭಾಷಣ ನಡೆಸಿದರೆಂಬ ಆರೋಪದ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡ ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಕೆ. ಪಿ. ಶಶಿಕಲಾರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಶಿಕಲಾ ಅವರು ಮಾರಾಡ್ ಹಾಗೂ  ಮಲಪ್ಪುರಂನಲ್ಲಿ ನಡೆಸಿದ ಭಾಷಣದ ಭಾಗವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಶಶಿಕಲಾ ಟೀಚರ್ ವಿರುದ್ಧ ಜಿಲ್ಲಾ ಪಬ್ಲಿಕ್ ಪ್ರೋಸಿಕ್ಯೂಟರ್ ಸಿ. ಶುಕೂರು ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು.  ಕೋಮುಭಾವನೆ ಕೆರಳುವ ರೀತಿಯಲ್ಲಿ ಭಾಷಣ ಮಾಡಿದರೆಂದು ಶಶಿಕಲಾ ಟೀಚರ್ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

NO COMMENTS

LEAVE A REPLY