ಮೆಜಿಸ್ಟ್ರೇಟ್ರ ಮೃತದೇಹದಲ್ಲಿ ೨೭ ಆಂತರಿಕ, ಬಾಹ್ಯ ಗಾಯ ಗುರುತು ಪತ್ತೆ: ಸುಳ್ಯದಲ್ಲಿ ಜತೆಗಿದ್ದವರ ಬಗ್ಗೆ ತನಿಖೆ

0
38

ಕಾಸರಗೋಡು: ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ಮೆಜಿಸ್ಟ್ರೇಟ್ ವಿ.ಕೆ. ಉಣ್ಣಿಕೃಷ್ಣನ್ (೪೫)ರ ಸಾವು ಆತ್ಮಹತ್ಯೆಯಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟಗೊಂಡಿದೆ.

ಮರಣೋತ್ತರ ಪರೀಕ್ಷಾ ವರದಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿದ್ಯಾನಗರ ಸಿ.ಐ ಬಾಬು ಪೆರಿಂಙೋತ್ತ್ ರಿಗೆ ಲಭಿಸಿದೆ. ಮೃತದೇಹದಲ್ಲಿ ಒಟ್ಟು ೨೭ ಆಂತರಿಕ ಮತ್ತು ಬಾಹ್ಯ  ಗಾಯದ ಕಲೆಗಳು ಪತ್ತೆಯಾಗಿದೆ.  ಉಣ್ಣಿಕೃಷ್ಣನ್ ಸುಳ್ಯಕ್ಕೆ ಹೋಗಿದ್ದ ವೇಳೆ ಅಲ್ಲಿ  ಅವರಿಗೆ ಒಂದು ತಂಡ ಹಲ್ಲೆ ನಡೆಸಿತ್ತು.  ಬಳಿಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಅವರಿಗೆ  ಪೊಲೀಸ್ ದೌರ್ಜನ್ಯ ನಡೆಸಲಾಗಿತ್ತೆಂಬ ದೂರುಂಟಾಗಿತ್ತು. ಉಣ್ಣಿಕೃಷ್ಣನ್‌ರ ದೇಹ ದಲ್ಲಿ ಆಂತರಿಕ ಹಾಗೂ ಬಾಹ್ಯ ಗಾಯ ವುಂಟಾಗಲು ಕಾರಣವಾಗಿದೆಯೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾ ಗಿದೆ. ಆಬಗ್ಗೆ ಸಮಗ್ರ ತನಿಖೆ ನಡೆಸಲಾ ಗುತ್ತಿದೆಯೆಂದು ಸಿಐ ತಿಳಿಸಿದ್ದಾರೆ.

ಉಣ್ಣಿಕೃಷ್ಣನ್ ಸುಳ್ಯಕ್ಕೆ ಹೋಗಿದ್ದ ವೇಳೆ ಅವರ ಜತೆ ಇತರ ಮೂವರಿದ್ದರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದ್ದು, ಅವರು ಯಾರು ಮತ್ತು ಯಾತಕ್ಕಾಗಿ   ಉಣ್ಣಿಕೃಷ್ಣನ್ ಜತೆ ಹೋಗಿದ್ದರೆಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದೆಂದು ಸಿ.ಐ ತಿಳಿಸಿದ್ದಾರೆ.

ಕರ್ನಾಟಕ ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕು ಆಯೋಗವೂ ಇನ್ನೊಂದೆಡೆ   ತನಿಖೆ ಆರಂಭಿಸಿದೆ. ತೃಶೂರು ಮುಲ್ಲಾಶ್ಶೇರಿ ಅಯ್ಯಪ್ಪಕುಡಂ ಕ್ಷೇತ್ರ ಬಳಿಯ ನಿವಾಸಿಯಾಗಿರುವ ಉಣ್ಣಿಕೃಷ್ಣನ್ ನವೆಂಬರ್ ೯ರಂದು ಬೆಳಿಗ್ಗೆ ವಿದ್ಯಾನಗರದ ಮೆಜಿಸ್ಟ್ರೇಟ್ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

NO COMMENTS

LEAVE A REPLY