ಆಟೋ ಚಾಲಕ ಉಪೇಂದ್ರ ಕೊಲೆ ಪ್ರಕರಣ: ವಿಚಾರಣೆ ನ.೨೩ರಿಂದ ಆರಂಭ

0
304

ಕಾಸರಗೋಡು:   ಭಾರೀ ಕೋಲಾಹಲವೆಬ್ಬಿಸಿದ ಆಟೋ ರಿಕ್ಷಾ ಚಾಲಕ ಉಪೇಂದ್ರನ್ ಪಿ.ಸಿ(೨೬) ಕೊಲೆ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದಲ್ಲಿ ನವೆಂಬರ್ ೨೩ರಿಂದ ಆರಂಭಗೊಳ್ಳಲಿದೆ.

ಕಾಸರಗೋಡು ಅಣಂಗೂರು ಟಿಪ್ಪು ನಗರದ ಖೈಸಲ್ ಕೆ. (೨೨) ಅಣಂಗೂರು ಪಚ್ಚಕ್ಕಾಡ್ ಕೊರಕ್ಕೋಡ್ ಹೌಸ್‌ನ ಅಬ್ದುಲ್ ನಾಸರ್ ಕೆ.ಎ. (೩೦), ಅಣಂ ಗೂರು ಕೊಲ್ಲಂಪಾಡಿ ಮೊಯ್ದೀನ್ ಮಂಜಿಲ್‌ನ ರಹಿಮಾನ್ ಫದಲು ಎ.(೨೪), ಕುಂಬಳೆ ಆರಿಕ್ಕಾಡಿ ಕೊಡ್ಯಮ್ಮೆ ಬಿ.ಪಿ. ಹೌಸ್‌ನ ಅಬ್ದುಲ್ಲ ಸಿ. ಅಲಿಯಾಸ್ ಅಂದುಂಞಿ (೩೦), ಕಾಸರಗೋಡು ನೆಲ್ಲಿಕುಂಜೆ ಕೆ.ಎಂ.ಎ. ಹೌಸ್‌ನ ರಿಶಾಲ್ ಕೆ.ಎಂ.(೧೯), ಅಣಂಗೂರು ಟಿವಿ ಸ್ಟೇಷನ್ ರಸ್ತೆ ಬಳಿಯ ಫೈಸಲ್ ಮಂಜಿಲ್‌ನ ನೌಶಾದ್ ಎಂ. (೧೯), ಅಣಂಗೂರು ಟಿಪ್ಪು ನಗರ ಹಬೀಬ್ ಮಂಜಿಲ್‌ನ ಶಾಹುಲ್ ಹಮೀದ್ ಪಿ.ಎ.(೨೨), ಕೂಡ್ಲು ಎರಿಯಾಲ್ ಕೊಳಂಗರೆ ಹೌಸ್ ಶಾಹಿದಾ ಮಂಜಿಲ್‌ನ ಇಬ್ರಾಹಿಂ ಖಲೀಲ್ ಅಲಿಯಾಸ್ ಖಲೀಲ್ (೨೫) ಮತ್ತು ತಳಂಗರೆ ತೆರುವತ್ತ್ ಸಿರಾಮಿಕ್ಸ್ ರೋಡ್ ಬಳಿಯ ಶೇಕ್ ಮೊಹಮ್ಮದ್ ನವಾಸ್ ಅಲಿಯಾಸ್ ನವಾಸ್ (೩೩) ಎಂಬವರು ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.

೨೦೧೧ ಜನವರಿ ೨೪ರಂದು ಮಧೂರು ಗ್ರಾಮದ ಪನ್ನಿಪ್ಪಾರೆ ಬಳಿಯ ಮಣ್ಣಿನ ರಸ್ತೆಯಲ್ಲಿ ಆಟೋರಿಕ್ಷಾ ಚಾಲಕ ಉಪೇಂದ್ರನ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂಲತಃ ತಿರುವನಂತಪುರ ಪುಳಿಮುಚ್ಚಿಲ್, ಪನಟ್ಟಿಮೂಡ್ ವೇಂಙಾಡ್‌ನ ಚಂದ್ರನ್ ಕುಮಾರ್ ಕೆ.ಪಿ. ಎಂಬವರ ಪುತ್ರನಾಗಿರುವ ಉಪೇಂದ್ರನ್ ವಿದ್ಯಾನಗರದ ಪನ್ನಿಪ್ಪಾರೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಕಾಸರಗೋಡು ನಗರದಲ್ಲಿ ಆಟೋರಿಕ್ಷಾ ಚಲಾಯಿಸುತ್ತಿದ್ದ ಉಪೇಂ ದ್ರನ್‌ನನ್ನು ಬಾಡಿಗೆ ಹೆಸರಿನಲ್ಲಿ  ಉಪಾ ಯದಿಂದ ಪನ್ನಿಪ್ಪಾರೆಗೆ ಕರೆದೊಯ್ದು,   ಇರಿದು ಬರ್ಬರವಾಗಿ ಕೊಲೆಗೈಯ್ಯ ಲಾಗಿತ್ತು. ಮೃತದೇಹ ಪತ್ತೆಯಾದ ಸಮೀಪದಲ್ಲೇ ಆಟೋರಿಕ್ಷಾವೂ ಪತ್ತೆಯಾಗಿತ್ತು. ತಿರುವನಂತಪುರದಿಂದ ಕಾಸರಗೋಡಿಗೆ ಆಗಮಿಸಿ ಇಲ್ಲಿ  ರಿಕ್ಷಾ ಚಾಲಕನಾದ ಉಪೇಂದ್ರನ್ ಕೇಳುಗುಡ್ಡೆಯ  ಶಾಂತಿ ಎಂಬವಳನ್ನು ವಿವಾಹವಾಗಿದ್ದರು. ಉಪೇಂದ್ರನ್ ಕೊಲೆಯಾದ ವೇಳೆ ಅವರ ಪತ್ನಿ ಗರ್ಭಿಣಿಯೂ ಆಗಿದ್ದಳು. ಈ ಕೊಲೆ ಪ್ರಕರಣದಲ್ಲಿ ಒಟ್ಟು ೫೮ ಮಂದಿ ಸಾಕ್ಷಿಗಳಿದ್ದಾರೆ.

NO COMMENTS

LEAVE A REPLY