ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

0
30

ಕಾಸರಗೋಡು: ಬೇಕಲ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಕಳವುಪ್ರಕರಣವೊಂದರ ಆರೋಪಿಯಾಗಿದ್ದು ಕಳೆದ ೧೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿದ್ಯಾನಗರ ಎಸ್.ಐ. ಪ್ರಶೋಬ್ ನೇತೃತ್ವದ ಪೊಲೀಸ್ ತಂಡ ವಾರಂಟ್ ಪ್ರಕಾರ ಬಂಧಿಸಿದೆ. ಚೆಂಗಳ ಪಟ್ರಮೂಲೆ ಎರಿಯಪ್ಪಾಡಿ ಅಬ್ದುಲ್ ಖಾದರ್ ಅಲಿಯಾಸ್ ಶೇಕ್ ಕುಟ್ಟಿ (೫೧) ಬಂಧಿತನಾದ ಆರೋಪಿಯಾಗಿ ದ್ದಾನೆ. ೧೯೯೯ರಲ್ಲಿ ಬೇಕಲ ಪೊಲೀಸ್ ಠಾಣೆಯಲ್ಲಿ ದಾಖಳುಗೊಂಡಿದ್ದ ಕಳವು ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದನೆಂದೂ ಬಳಿಕ ೨೦೦೭ರಿಂದ ಆದ ತಲೆಮರೆಸಿಕೊಂ ಡಿದ್ದನು. ಅಂದಿನಿಂದ ಆತನನ್ನು ನ್ಯಾಯಾಲಯ ತಲೆಮರೆಸಿಕೊಂಡಿದ್ದ ಆರೋಪಿಯನ್ನಾಗಿ ಘೋಷಿಸಿ ವಾರಂಟ್ ಜ್ಯಾರಿಗೊಳಿಸಿತ್ತು. ಈ ಮಧ್ಯೆ ವಿದ್ಯಾನಗರ ಪೊಲೀಸರು ನಿನ್ನೆ ವ್ಯಾಪಕ ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

NO COMMENTS

LEAVE A REPLY