ಮಾಹಿತಿ ಹಕ್ಕು ಅರ್ಜಿ ಅವಗಣನೆ: ಕುಂಬಳೆ ಪಂ. ಕಾರ್ಯದರ್ಶಿಗೆ ದಂಡ

0
37

ಕುಂಬಳೆ: ಕುಂಬಳೆ ಪಂಚಾಯತ್‌ನ ೯ನೇ ವಾರ್ಡ್‌ನಲ್ಲಿ ರಾಷ್ಟ್ರೀಯ ಉದ್ಯೋಗಖಾತರಿ ಯೋಜನೆ ನಡೆಸುವುದರ ಕುರಿತು ಮಾಹಿತಿ ಹಕ್ಕು ಕಾನೂನು ಪ್ರಕಾರ ನೀಡಿದ ಅರ್ಜಿಯನ್ನು ಅವಗಣಿಸಿದ ಪಂಚಾಯತ್ ಕಾರ್ಯದರ್ಶಿಗೆ ರಾಜ್ಯ ಮುಖ್ಯಮಾಹಿತಿ ಹಕ್ಕು ಆಯುಕ್ತ ವಿನ್ಸೆಂಟ್ ಎಂ. ಪೋಲ್ ೫೦೦೦ ರೂ. ದಂಡ ವಿಧಿಸಿದ್ದಾರೆ. ನಾಯ್ಕಾಪಿನಲ್ಲಿ ವಾಸಿಸುವ ಬಿ. ಸುಬ್ರಹ್ಮಣ್ಯ ನಾಯ್ಕ್‌ರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಪಂ.೯ನೇ ವಾರ್ಡ್ ಉದ್ಯೋಗ ಖಾತರಿ ಯೋಜನೆಯ ಮಸ್ಟರ್ ರೋಲ್‌ನ ಪ್ರತಿ ಬೇಕೆಂದು ಆಗ್ರಹಿಸಿ ನೀಡಿದ ಅರ್ಜಿಯಲ್ಲಿ ಪ್ರತಿಕ್ರಿಯೆ ನೀಡದಿದ್ದಾಗ ಅನಂತರ ನೀಡಿದ ಅಪೀಲಿನಲ್ಲಿ ಅರ್ಜಿಯಲ್ಲಿ ತಿಳಿಸಿದ ಮಾಹಿತಿಗಳನ್ನು ಕೂಡಲೇ ನೀಡಲು ಮುಖ್ಯ ಮಾಹಿತಿ ಹಕ್ಕು ಆಯುಕ್ತರು ತಿಳಿಸಿ ಪಂಚಾಯತ್ ಕಾರ್ಯ ದರ್ಶಿಗೆ ತಾಕೀತು ನೀಡಿದ್ದರು. ಆ ನಿರ್ದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.

NO COMMENTS

LEAVE A REPLY