ಬದಿಯಡ್ಕ: ಅಖಿಲ ಕೇರಳ ಯಾದವ ಸಭಾ ಬದಿಯಡ್ಕ ಪಂಚಾಯತ್ ಸಮಿತಿ ಹಾಗೂ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಶ್ರೀಕೃಷ್ಣ ಜಯಂತ್ಯುತ್ಸವ ಸೆ. ೫ರಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ೭ಕ್ಕೆ ಅಪ್ಪಯ್ಯ ಮಣಿಯಾಣಿ ಈಳಂತೋಡಿ ದೀಪ ಪ್ರತಿಷ್ಠೆ ನಡೆಸುವರು ೭.೧೫ರಿಂದ ಭಜನೆ, ೮ರಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಭಾದ ಪಂ. ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸುವರು. ಡಿಸಿಆರ್ಒ ಡಿವೈಎಸ್ಪಿ ಕೆ. ದಾಮೋದರನ್ ಉದ್ಘಾಟಿಸುವರು. ಡಿ.ಇ.ಒ ಇ. ವೇಣುಗೋಪಾಲ್ ಎಡನೀರು ಮುಖ್ಯ ಅತಿಥಿಯಾಗಿರುವರು.
ಈ ಸಂದರ್ಭದಲ್ಲಿ ಶಿವರಾಮ ಮಣಿಯಾಣಿ ದೇವರಮೆಟ್ಟು ಹಾಗೂ ರಾಮ ಮಣಿಯಾಣಿ ಕಾಕುಂಜೆ ಅವರನ್ನು ಕೃಷ್ಣನ್ ಅಡ್ಕತೊಟ್ಟಿ ಸನ್ಮಾನಿಸುವರು.