ಮರಳು ಸಾಗಾಟ ಎರಡು ಲಾರಿ ಸಹಿತ ಇಬ್ಬರ ಸೆರೆ

0
1341
Exif_JPEG_420

ಮಂಜೇಶ್ವರ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ನಿನ್ನೆ ಸಂಜೆ ತಲಪಾಡಿ ಭಾಗದಿಂದ ಹೊಸಂಗಡಿಯತ್ತ ಹೊಯ್ಗೆ ಸಾಗಿಸುತ್ತಿದ್ದ ಮಿನಿಲಾರಿಯನ್ನು ಕುಂಜತ್ತೂರಿನಿಂದ ಟಿಪ್ಪರ್ ಲಾರಿಯನ್ನು ಹೊಸಂಗಡಿ ಯಿಂದ ವಶಪಡಿಸಲಾಗಿದೆ. ಈಸಂ ಬಂಧ ಚಾಲಕರಾದ ಕೊಯಿಪ್ಪಾಡಿ ಶಾಂತಿಪಳ್ಳ ನಿವಾಸಿ ವೆಂಕಟೇಶ್, ಪಳ್ಳದಕೋಡಿ ಕೆದುಂಬಾಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬಿವರನ್ನು ಸೆರೆಹಿಡಿದು ಮರಳು ಕಳವು ಪ್ರಕರಣ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆ ಎಸ್.ಐ  ಪಿ. ಪ್ರಮೋದ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿದ ಎರಡು ಮರಳು ವಾಹನಗಳು ಕರ್ನಾಟಕ ನೋಂದಾವಣೆಯದ್ದಾಗಿದೆ.

NO COMMENTS

LEAVE A REPLY