ಐಸ್ಕ್ರೀಂ ವಾಹನ ಬೆಂಕಿಗಾಹುತಿ

0
347

ಮಂಜೇಶ್ವರ: ಐಸ್‌ಕ್ರೀಂ ಸಾಗಾಟ ವಾಹನವೊಂದು ಸಂಚರಿಸುತ್ತಿದ್ದಂತೆ  ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಇಂದು ಬೆಳಿಗ್ಗೆ ೧೦ ಗಂಟೆಗೆ ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಬಳಿ ಘಟನೆ ನಡೆದಿದೆ. ತಲಪಾಡಿಯ ಸ್ಕೈಐಸ್‌ಕ್ರೀಂ ಕಂಪೆನಿಯ ವಾಹನ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂ. ಗಳ ನಷ್ಟ ಅಂದಾಜಿಸಲಾಗಿದೆ.

ಇಂದು ಬೆಳಿಗ್ಗೆ ಐಸ್‌ಕ್ರೀಂ ನೊಂದಿಗೆ  ಕಾಸರಗೋಡಿನತ್ತ ತೆರಳುತ್ತಿದ್ದ ವಾಹನ ವಾಮಂಜೂರಿಗೆ ತಲುಪಿದಾಗ ಇಂಜಿನ್‌ನಿಂದ ದಿಢೀರ್ ಬೆಂಕಿ ಕಾಣಿಸಿದೆ. ಕೂಡಲೇ ಅಲ್ಲಿ ನಿಲ್ಲಿಸಿದ್ದ ಚೆಕ್‌ಪೋಸ್ಟ್ ಅಧಿಕಾರಿಗಳು ಹಾಗೂ ಪರಿಸರ ನಿವಾಸಿಗಳು ಸೇರಿ ನೀರೆರೆದರೂ ಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ. ವಾಹನದಲ್ಲಿದ್ದವರು ತಕ್ಷಣ ಹೊರಗಿಳಿದ ಹಿನ್ನೆಲೆಯಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ. ಬ್ಯಾಟರಿಯಿಂದ ಶಾರ್ಟ್ ಸರ್ಕ್ಯೂಟ್‌ಗೊಂಡು ಬೆಂಕಿ ತಗಲಿರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY