ಅಂಗಡಿಮೊಗರು ಹೊಳೆಯಲ್ಲಿ ದೇವಾಲಯ ಭಗ್ನ ಅವಶೇಷ ಪತ್ತೆ

0
551

ಪುತ್ತಿಗೆ: ಅಂಗಡಿಮೊಗರು ಹೊಳೆಯಲ್ಲಿ ದೇವಾಲಯದ ಭಗ್ನ ಅವಶೇಷಗಳನ್ನು ಪತ್ತೆಹಚ್ಚಲಾಗಿದೆ.

ಅಂಗಡಿಮೊಗರು ಸೇತುವೆ ಸಮೀಪ ಹೊಳೆಯಲ್ಲಿ ಸ್ನಾನ ಮಾಡು ತ್ತಿದ್ದ ಯುವಕರು ಈ ಅವಶೇಷಗಳನ್ನು ಪತ್ತೆಹಚ್ಚಿದರು. ಅದ್ಭುತ ಕೆತ್ತನೆಗಳನ್ನೊಳ ಗೊಂಡ ದೇವಾಲಯದ ಗರ್ಭಗುಡಿಯ ಮುಂಭಾಗದ ಸಿಂಹದ್ವಾರದ ಕಲ್ಲು, ಬಲಿಕಲ್ಲು, ಶಿಲಾಕಂಬ ಮುಂತಾದ ವುಗಳನ್ನು ಪತ್ತೆಹಚ್ಚಲಾಗಿದೆ. ದೇವಾಲಯ ಜೀರ್ಣೋದ್ಧಾರ ಸಂದರ್ಭದಲ್ಲಿ ಹಳೆಯ ಶಿಲಾಕಲ್ಲುಗಳನ್ನು ಲಾರಿಯಲ್ಲಿ ತಂದು ಸೇತುವೆಯಿಂದ ಕೆಳಕ್ಕೆಸೆದು ನದಿ ನೀರಿನಲ್ಲಿ ಉಪೇಕ್ಷಿಸಿರಬಹುದೆಂದು ಹೇಳಲಾಗುತ್ತಿದೆ. ಸ್ಥಳೀಯ ಸತ್ತಾರ್, ಹಮೀದ್, ಸವಾದ್‌ರ ತಂಡ  ಇವುಗಳನ್ನು ಪತ್ತೆಹಚ್ಚಿದೆ.

NO COMMENTS

LEAVE A REPLY