ಶಾಲಾ ಕಲೋತ್ಸವ ವೇಳೆ ವಾಗ್ವಾದ ಪುಟ್ಟ ಮಗು ಸಹಿತ ದಂಪತಿಗೆ ಹಲ್ಲೆ

0
283

ಮಂಜೇಶ್ವರ: ಧರ್ಮತ್ತಡ್ಕದಲ್ಲಿ ನಡೆದ ಶಾಲಾ ಕಲೋತ್ಸವ ವೇಳೆ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ತಂಡವೊಂದು ನಡೆಸಿದ ಹಲ್ಲೆಯಲ್ಲಿ ಪುಟ್ಟ ಮಗು ಸಹಿತ ದಂಪತಿ ಗಾಯಗೊಂಡಿದ್ದಾರೆ. ಧರ್ಮತ್ತಡ್ಕ ತಲೆಮೊಗರು ನಿವಾಸಿ ವೇಣುಗೋಪಾಲ ಶೆಟ್ಟಿ (೩೨), ಪತ್ನಿ ರೂಪಿಕಾ (೩೨), ಪುತ್ರ ರಿಷಾನ್ (೧) ಎಂಬಿವರು ಹಲ್ಲೆಯಿಂದ ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶಾಲಾ ಕಲೋತ್ಸವ ನಡೆಯುತ್ತಿದ್ದಂತೆ ನಾಲ್ಕು ಮಂದಿ ತಂಡ ಹಾಗೂ ಸ್ವಯಂ ಸೇವಕರಾದ ಕ್ಲಬ್‌ನ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಈವೇಳೆ ಅಲ್ಲಿದ್ದ ವೇಣುಗೋಪಾಲ ಶೆಟ್ಟಿ ಜೊತೆಯೂ ತಂಡ ವಾಗ್ವಾದ ನಡೆಸಿತ್ತು. ಬಳಿಕ ವೇಣುಗೋಪಾಲ್ ಪತ್ನಿ ಹಾಗೂ ಪುತ್ರನೊಂದಿಗೆ ಮರಳುತ್ತಿದ್ದಂತೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ.

NO COMMENTS

LEAVE A REPLY