ಇಲಿಜ್ವರ: ಯುವಕ ಮರಣ; ಅನಾಥವಾದ ಕುಟುಂಬ

0
994

ಕುಂಬಳೆ: ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನೋರ್ವ ಇಲಿಜ್ವರ ಬಾಧಿಸಿ ಮರಣವನ್ನಪ್ಪಿದ್ದು, ಅಸೌಖ್ಯದಿಂದ ಮಲಗಿದ್ದಲ್ಲೇ ಇರುವ ಈತನ  ಸಹೋದರ ಹಾಗೂ ವೃದ್ಧ ತಾಯಿ ಅನಾಥರಾದ ದಾರುಣ ಘಟನೆ ಸಂಭವಿಸಿದೆ.

ಕೋಟೆಕಾರ್ ಕಬೀರ್ ಕಾಲನಿಯ ದಿ| ಸುಂದರರ ಪುತ್ರ ಸಂಜೀವ (೩೮) ಇಲಿಜ್ವರ ಬಾಧಿಸಿ ಮರಣವನ್ನಪ್ಪಿದ ಯುವಕ ೩ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಇವರನ್ನು ಕುಂಬಳೆ  ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಜ್ವರ ಉಲ್ಭಣಗೊಂಡುದುದರಿಂದ ಇವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕೂಲಿ ಕೆಲಸ ಮಾಡಿ ಮನೆಯ ವರನ್ನು ಸಲಹುತ್ತಿದ್ದ ಇವರು ತಾಯಿ ೭೦ರ ವಯಸ್ಸಿನ ಕಲ್ಯಾಣಿ, ಸಹೋದರ ೩೨ರ ಹರೆ ಯದ ಜಯ ನನ್ನು ಅಗಲಿದ್ದಾರೆ. ಜಯ ಅವರು ತನ್ನ ೧೦ನೇ ವಯಸ್ಸಿನಲ್ಲಿ ಹೊಳೆ ಯಲ್ಲಿ ಸ್ನಾನ ಮಾಡು ತ್ತಿದ್ದಾಗ ಯಾವುದೋ  ಪೀಡೆಗೊಳಗಾಗಿ ಬಳಿಕ ಮನೆಯಲ್ಲಿ ಬಂದು ಮಲಗಿದವರು ಮೇಲೇ ಳಲಿಲ್ಲ.  ಕಾಲುಗಳು ಸ್ವಾಧೀನ ಕಳೆದುಕೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ವಿದ್ಯುತ್ ಸಂಪರ್ಕ ಕೂಡಾ ಇಲ್ಲದ ಪುಟ್ಟ ಮನೆಯಲ್ಲಿ  ವಾಸಿಸುವ ದುಃಖತಪ್ತ ಈ ಕುಟುಂಬ ಸಂಜೀವರ ಮರಣದಿಂದಾಗಿ ಅತೀವ ಸಂಕಷ್ಟಕ್ಕೊಳಗಾಗಿದೆ.

NO COMMENTS

LEAVE A REPLY