ಸಹಪಾಠಿಗಳಿಂದ ರ‍್ಯಾಗಿಂಗ್: ಸೇತುವೆಯಿಂದ ಹಾರಿ ವಿದ್ಯಾರ್ಥಿ ಆತ್ಯಹತ್ಯೆಗೆ ಯತ್ನ

0
676

ಕುಂಬಳೆ: ಸಹಪಾಠಿಗಳಿಂದ ರ‍್ಯಾಗಿಂಗ್‌ಗೊಳಗಾದ ವಿದ್ಯಾರ್ಥಿ ಯೋರ್ವ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದೆ.

ಕುಂಬಳೆ ಸರಕಾರಿ ಹೈಸ್ಕೂಲ್‌ನ ೮ನೇ ತರಗತಿ ವಿದ್ಯಾರ್ಥಿಯೋರ್ವ ನಿನ್ನೆ ಸಂಜೆ ಕುಂಬಳೆ ಸೇತುವೆಯಿಂದ ನದಿಗೆ ಹಾರಿ ಆತ್ಯಹತ್ಯೆಗೆ ಯತ್ನಿಸಿದ. ನದಿ ನೀರಿನಲ್ಲಿ ಮುಳುಗೇಳುತ್ತಿದ್ದ ಈತನನ್ನು ಪರಿಸರದಲ್ಲಿ ಗಾಳ ಹಾಕುತ್ತಿದ್ದ ಯುವಕರ ತಂಡ ಮೇಲಕ್ಕೆತ್ತಿ ರಕ್ಷಿಸಿತು.

ಆರಿಕ್ಕಾಡಿ ನಿವಾಸಿಯಾದ ಈತ ನಿನ್ನೆ ೨ ಗಂಟೆಗೆ ತರಗತಿಯಲ್ಲಿ ಸಹಪಾಠಿಗಳಿಂದ ರ‍್ಯಾಗಿಂಗ್‌ಗೊಳ ಗಾದನು. ಮನನೊಂದ ಈತನನ್ನು ಅಧ್ಯಾಪಕರು ಸಮಾಧಾನ ಪಡಿಸಿದ ರೂ ಪುಸ್ತಕ, ಬ್ಯಾಗ್ ಹೆಗಲಿಗೇರಿಸಿ ಓಡಿ ಹೋದ ಈತ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಯಿಂದ ಬ್ಯಾಗ್ ಸಹಿತ ನದಿನೀರಿಗೆ ಜಿಗಿದನು. ನೀರಿನಲ್ಲಿ ಮುಳುಗೇಳು ತ್ತಿದ್ದ ಈತನನ್ನು ಕೊಯಿಪ್ಪಾಡಿ ಕಡವತ್‌ನ ಹರ್ಷಾದ್, ಹನೀಫ್, ನಸೀರ್ ಹಾಗೂ ಸೇತುವೆ ಸಮೀಪದ ನಿವಾಸಿ ಪ್ರಿನ್ಸ್ ನದಿಗೆ ಹಾರಿ ಈಜಿ ಈತನನ್ನು ರಕ್ಷಿಸಿದರು. ಬಳಿಕ ಈತ ನಿಗೆ ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

NO COMMENTS

LEAVE A REPLY