ಮಂಗಳೂರು ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ೩೮ ಮಂದಿ ಜಖಂ

0
2652

ಚೆನ್ನೈ: ಚೆನ್ನೈ-ಎಗ್ನೋರ್- ಮಂಗಳೂರು ಎಕ್ಸ್‌ಪ್ರೆಸ್ ರೈಲುಗಾಡಿ ತಮಿಳ್ನಾಡಿನ ವಿಲ್ಲಾಪುರ ಬಳಿಯ ಪುನನೂರು ಎಂಬಲ್ಲಿ ಹಳಿತಪ್ಪಿ ಮಗುಚಿ ಬಿದ್ದು ೩೮ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಯಾರಿಗೂ ಗಂಭೀರ ಗಾಯ ಉಂಟಾಗಿಲ್ಲವೆಂದು ರೈಲ್ವೇ ಇಲಾಖೆ   ಅಧಿಕಾರಿಗಳು ತಿಳಿಸಿ ದ್ದಾರೆ. ಗಾಯಗೊಂಡವರಲ್ಲಿ ೨೫ ಮಂದಿ ಮಹಿಳೆಯರು ಒಳಗೊಂಡಿದ್ದಾರೆ.

ಇಂದು ಮುಂಜಾನೆ ೩ ಗಂಟೆಗೆ   ಘಟನೆ ನಡೆದಿದೆ. ರೈಲಿನ ನಾಲ್ಕು ಬೋಗಿ ಗಳು ಪೂರ್ಣವಾಗಿ ಹಳಿ ತಪ್ಪಿವೆ. ಅಪ ಘಾತಕ್ಕೆ ಕಾರಣವೇನೆಂ ದು  ತಿಳಿದು ಬಂದಿಲ್ಲವೆಂದೂ, ಆದರೆ ಇದು ಬುಡ ಮೇಲು ಕೃತ್ಯವಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂ ಡವರನ್ನು ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾ ಗಿದೆ.  ಇತರ ಪ್ರಯಾಣಿಕರನ್ನು ಬಸ್ಸುಗಳಲ್ಲಿ ಸೇಲಂ ಮತ್ತು ವಿಲ್ಲಾಪುರಕ್ಕೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರೈಲ್ವೇ ಇಲಾಖೆ ಸಿಬ್ಬಂದಿಗಳು, ಪೊಲೀಸರು, ಅಗ್ನಿಶಾಮಕದಳದವರು ಮತ್ತು ಊರವರು ಸಹಕರಿಸಿದರು.

NO COMMENTS

LEAVE A REPLY