ಅಪಘಾತಕ್ಕೀಡಾದ ಕಾರಿನಿಂದ ಟಯರ್ ಸಹಿತ ಬಿಡಿಭಾಗಗಳ ಕಳವು

0
236

ಉಪ್ಪಳ: ಅಪಘಾತಕ್ಕೀಡಾದ ಕಾರಿನಿಂದ ೩ ಟಯರ್ ಸಹಿತ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳವುಗೈದ ಘಟನೆ ನಡೆದಿದೆ. ಲಾಲ್‌ಭಾಗ್ ಕಾಯರ್‌ಕಟ್ಟೆ ನಿವಾಸಿ ಅಬ್ದುಲ್ ಸಲಾಂ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಟವೇರಾ ಕಾರು ಮೊನ್ನೆ ಸಂಜೆ ಉಪ್ಪಳ ಬಳಿಯ ಭಗವತೀಗೇಟ್ ಪರಿಸರದ ಹೆದ್ದಾರಿಯಲ್ಲಿ ಢಿಕ್ಕಿ ಹೊಡೆದಿದ್ದುವು. ಇದರಿಂದ ಹಾನಿಗೀಡಾಗಿ ಹೆದ್ದಾರಿ ಬದಿಯಲ್ಲೇ ನಿಲ್ಲಿಸಲಾದ ಸ್ವಿಫ್ಟ್ ಕಾರಿನಿಂದ ಹಿಂಬದಿಯ ಎರಡು ಟಯರ್, ಒಂದು ಸ್ಟೆಪ್ಪಿನ್ ಟಯರ್, ಬ್ಯಾಟರಿ, ಸ್ಟಿರಿಯೋ, ೨ ಸ್ಪೀಕರ್ ಕಳವುಹೋಗಿರುವುದಾಗಿ ದೂರಲಾಗಿದೆ. ಚಾಲಕನ ಭಾಗದ ಗಾಜನ್ನು ಹುಡಿಮಾಡಿ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ರಾತ್ರಿ ೧೨ ಗಂಟೆಯ ವೇಳೆ ಸಂಬಂಧಿಕರು ಮರಳಿದ್ದರು. ಈ ವೇಳೆ ಕಾರಿನಲ್ಲಿ ಎಲ್ಲವೂ ಸರಿಯಾಗಿತ್ತು. ನಿನ್ನೆ ಬೆಳಿಗ್ಗೆ ನೋಡಿದಾಗ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವುಹೋದ ಬಗ್ಗೆ ಗಮನಕ್ಕೆ ಬಂದಿದೆ. ಟಯರ್ ಕಳವುಗೈದು ಕಲ್ಲುಗಳನ್ನು ಇರಿಸಲಾಗಿದೆ. ಕಳವಿಗೀಡಾದ ಸಾಮಗ್ರಿಗಳಿಗೆ  ಸುಮಾರು ೩೫,೦೦೦ ರೂ. ನಷ್ಟ ಅಂದಾಜಿಸಲಾಗಿದೆ. ಈ ಸಂಬಂಧ ಗಾಯಾಳು ಅಬ್ದುಲ್ ಸಲಾಂನ ಸಂಬಂಧಿಕರಾದ ಲಾಲ್‌ಭಾಗ್ ಚಿಪ್ಪಾರ್ ನಿವಾಸಿಗಳಾದ ಸಯ್ಯಿದ್, ಕಲೀಲ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮೊನ್ನೆ ಸಂಜೆ ಕಾಯರ್ ಕಟ್ಟೆಯಿಂದ ಹೊಸಂಗಡಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಟವೇರಾ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಅಬ್ದುಲ್ ಸಲಾಂ ಹಾಗೂ ಕಾಯರ್‌ಕಟ್ಟೆಯ ಮೊಹಮ್ಮದ್ ಎಂಬವರು ಗಂಭೀರ ಗಾಯಗೊಂಡಿದ್ದು, ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಿಂದ ಬಿಡಿಭಾಗಗಳು ಕಳವಿಗೀಡಾದ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಪಘಾತ ಸಂಬಂಧ ಸ್ವಿಫ್ಟ್ ಕಾರು ಚಾಲಕ ಅಬ್ದುಲ್ ಸಲಾಂರ ದೂರಿನಂತೆ ಟವೇರಾ  ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY