ಎಲ್.ಬಿ.ಎಸ್ ಕಾಲೇಜಿನಲ್ಲಿ ಘರ್ಷಣೆ: ಆದೂರು ಪೊಲೀಸ್ ಠಾಣೆಗೆ ತಂಡದಿಂದ ೬ ಗಂಟೆ ಕಾಲ ಮುತ್ತಿಗೆ

0
633

ಮುಳ್ಳೇರಿಯ: ಪೊವ್ವಲ್ ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿನ್ನೆ ವಿದ್ಯಾರ್ಥಿಗಳ ಮಧ್ಯೆ ಉಂಟಾದ ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಆರು ಮಂದಿಯನ್ನು ಕಸ್ಟಡಿಗೆ ತೆಗೆದಿರುವುದನ್ನು ಪ್ರತಿಭಟಿಸಿ ಸಿಪಿಎಂ ನಡೆಸಿದ ಆದೂರು ಪೊಲೀಸ್ ಠಾಣೆ ಮುತ್ತಿಗೆ ದಿಗ್ಭ್ರಾಂತಿ ಸೃಷ್ಟಿಸಿತು.  ಪೊಲೀಸ್ ಠಾಣೆ ಆವರಣದಲ್ಲಿ ಪೂರ್ಣವಾಗಿ ಸಿಪಿಎಂ ಕಾರ್ಯಕರ್ತ ರು ಸುತ್ತುವರಿದ ಹಿನ್ನೆಲೆಯಲ್ಲಿ ಸಶಸ್ತ್ರ ಪೊಲೀಸ್ ತಂಡವೂ ಠಾಣೆ ಪರಿಸರಕ್ಕೆ ತಲುಪುವುದ ರೊಂದಿಗೆ ಜಾಲ್ಸೂರು ಅಂತಾರಾಜ್ಯ ರಸ್ತೆಯಲ್ಲಿ ಗಂಟೆಗಳ ಕಾಲ ಸಾರಿಗೆ ಅಡಚಣೆ ಉಂಟಾಯಿತು. ಪೊಲೀಸರು ಠಾಣೆ ಕಟ್ಟಡದಲ್ಲಿರುವ ಗೇಟ್‌ಗೆ ಬೀಗ ಜಡಿದು ಠಾಣೆಯೊಳಗೆ ಕುಳಿತುಕೊಂಡರು.  ನಾಲ್ಕು ಗಂಟೆ ವೇಳೆಗೆ ಡಿವೈಎಸ್ಪಿ ಟಿ. ಪಿ. ರಂಜಿತ್ ತಲುಪಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರೂ ಪ್ರಯೋಜನವುಂಟಾಗಿಲ್ಲ. ಅನಂತರ ಸ್ಥಳಕ್ಕೆ ತಲುಪಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಪಿಎಂ ನೇತಾರರೊಂದಿಗೆ ಚರ್ಚೆ ನಡೆಸಿದ ಬಳಿಕ ಕಾಲೇಜಿನಿಂದ ಕಸ್ಟಡಿಗೆ ತೆಗೆದ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಕಾರ್ಯದರ್ಶಿ ಹಾಗೂ ಇಬ್ಬರು ಎಂ.ಎಸ್. ಎಫ್ ಕಾರ್ಯಕರ್ತರನ್ನು ಬಿಡುಗಡೆಗೊ ಳಿಸಲು ತೀರ್ಮಾನಿಸಲಾಯಿತು. ಮತ್ತಿಬ್ಬರು ಎಸ್.ಎಫ್.ಐ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲು ನಿರ್ಧರಿಸಲಾಯಿತು.

ಸಮಸ್ಯೆಯನ್ನು ಚರ್ಚೆ ಮೂಲಕ ಪರಿಹರಿಸಿದ ಬಳಿಕ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲ್ಲಿಂದ ಮರಳಿದರೂ ಎಸ್.ಎಫ್.ಐ ಜಿಲ್ಲಾ ನೇತಾರರನ್ನು ಬಿಡುಗಡೆಗೊಳಿಸದೆ ಹಿಂಜರಿಯುವುದಿಲ ವೆಂಬ ನಿಲುವಿನಲ್ಲಿ ಸಿಪಿಎಂ ನೇತಾರರು ದೃಢವಾಗಿ ಉಳಿದರು. ಕೊನೆಗೆ ರಾತ್ರಿ ೮.೩೦ರ ವೇಳೆ ಎಸ್.ಎಫ್.ಐ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ ಹಾಗೂ ಇಬ್ಬರು ಎಂ.ಎಸ್.ಎಫ್ ಕಾರ್ಯಕ ರ್ತರನ್ನು ಬಿಡುಗಡೆಗೊಳಿಸು ವುದರೊಂದಿಗೆ  ಕಾರ್ಯಕರ್ತರು ಅಲ್ಲಿಂದ ಮರಳಿದರು.

ತಿರುವನಂತಪುರದಲ್ಲಿ ಓಣಂ ಆಚರಣೆ ವೇಳೆ ಎಸ್.ಎಫ್.ಐ ಕಾರ್ಯಕರ್ತರು ಚಲಾಯಿಸಿದ ಜೀಪು ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟಿರುವುದನ್ನು ಪ್ರತಿಭ ಟಿಸಿ ಕೆ.ಎಸ್.ಯು-ಎಂ.ಎಸ್.ಎಫ್ ಸಂಘಟನೆಗಳು ನಡೆಸಿದ ಮಾನಿಷಾದ ದಿನಾ ಚರಣೆ ವೇಳೆ ಎಸ್.ಎಫ್.ಐ-ಎಂ.ಎಸ್.ಎಫ್ ಕಾರ್ಯಕರ್ತರ ಮಧ್ಯೆ ಉಂಟಾದ ವಾಗ್ವಾದ ಘರ್ಷಣೆಯಲ್ಲಿ ಪರ್ಯವಸಾನಗೊಂಡಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕದ ಪ್ರಸಿದ್ಧ ಸಾಹಿತಿ ಎಂ. ಎಂ. ಕಲಬುರ್ಗಿ ಯವರನ್ನು ಗುಂಡಿಕ್ಕಿ ಕೊಲೆಗೈದುದನ್ನು ಪ್ರತಿಭಟಿಸಿ ಎಸ್.ಎಫ್.ಐ ರಂಗಗಿಳಿದಿತ್ತು.

ವಿಷಯ ತಿಳಿದು ತಲುಪಿದ ಪೊಲೀ ಸರಿಗೆ ಎಸ್.ಎಫ್.ಐ-ಎಂ.ಎಸ್.ಎಫ್-ಕೆ.ಎಸ್.ಯು ಕಾರ್ಯಕರ್ತರು ಗುಂಪು ಸೇರಿ ಹಲ್ಲೆಗೈದರೆಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಂಡ ರೋಬಿನ್ ಎಂಬ ಪೊಲೀಸ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಘಟನೆ ಸ್ಥಳದಿಂದ ಎಸ್.ಎಫ್.ಐ

NO COMMENTS

LEAVE A REPLY