ಎಲ್ಲರಿಗೂ ಮನೆ: ಪ್ರಧಾನಮಂತ್ರಿ ಆವಾಜ್ ನಲ್ಲಿ ಕಾಸರಗೋಡು ನಗರಸಭೆ

0
566

ಕಾಸರಗೋಡು: ‘ಎಲ್ಲರಿಗೂ ಮನೆ’ ಎಂಬ ಮಹತ್ತರ ಗುರಿಯೊಂದಿಗೆ ಭಾರತದಲ್ಲಿ ಜ್ಯಾರಿಗೊಳಿಸಲಾಗುವ ಪ್ರಧಾನಮಂತ್ರಿ ಆವಾಜ್ ಜ್ ಯೋಜನೆಯಲ್ಲಿ ಕಾಸರಗೋಡು ನಗರಸಭೆಯನ್ನೂ ಒಳಪಡಿಸಲಾಗಿದೆ. ಮೊದಲ ಹಂತದಲ್ಲಿ ಈ ಯೋಜ ಯಂತೆ ೭೯ ಕೋಟಿ ರೂ.ವನ್ನು ಕೇಂದ್ರ ವಸತಿ ನಿರ್ಮಾಣ ಖಾತೆ ಕೇರಳಕ್ಕೆ ಮಂಜೂರು ಮಾಡಿದೆ. ‘೨೦೨೨ರಲ್ಲಿ ದೇಶದ ಎಲ್ಲರಿಗೂ ನಿವೇಶನ’ ಎಂಬ ಆವಾಜ್ ಯೋಜನೆಯನ್ನು ಕಳೆದ ಜೂನ್ ೨೫ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿ ದ್ದರು. ಅದರಲ್ಲಿ ಕಾಸರಗೋಡು ನಗರಸಭೆ ಮಾತ್ರವಲ್ಲ, ತಿರುವನಂತಪುರ, ಕೊಲ್ಲಂ, ಕೊಚ್ಚಿ, ತೃಶೂರು ಮೊದಲಾದ ಕಾರ್ಪರೇಷನ್ಗಳು, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ತೊಡುಪುಳ, ತೆಕ್ಕೇಕರ, ಪಾಲಕ್ಕಾಡ್, ಮಲಪ್ಪುರಂ, ಕಣ್ಣೂರು, ಕಲ್ಪೆಟ್ಟ ನಗರಸಭೆಗಳನ್ನು ಒಳಪಡಿಸಲಾಗಿದೆ. ಈ ಯೋಜನೆಯಂತೆ ಕೊಳಗೇರಿ ಪ್ರದೇಶಗಳ ಪುನರ್ವಸತಿ, ಖಾಸಗಿ ಪಾಲುಗಾರಿಕೆಯೊಂದಿಗೆ ಇಂತಹ ಪ್ರದೇಶಗಳ ಅಭಿವೃದ್ಧಿ, ಸಾಲದ ಮೂಲಕ ಬಡ ವಿಭಾಗದ ವರಿಗೆ ಮನೆ ನಿರ್ಮಿಸಿ ಕೊಡುವಿಕೆ, ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರೊಂದಿಗೆ ಆರ್ಥಿಕತೆಗೆ ಹೊಂದಿಕೊಂಡು ಮನೆ ನಿರ್ಮಿಸಿ ವಿತರಿಸುವಿಕೆ ಮತ್ತು ಸ್ವಂತವಾಗಿ ಮನೆ ನಿರ್ಮಿಸಲು ಆಗ್ರಹಿಸುವವರಿಗೆ ಸಬ್ಸಿಡಿ ನೀಡಲಾಗುವುದು. ಪತಿ-ಪತ್ನಿ ಮತ್ತು ಅವಿವಾಹಿತ ರಾದ ಮಕ್ಕಳು ಒಳಗೊಂಡು ಸ್ವಂತವಾಗಿ ಮನೆ ಇಲ್ಲದ ಕುಟುಂಬ, ಆರ್ಥಿ ಕವಾಗಿ ಹಿಂದುಳಿದವರು (ಇ.ಡಬ್ಲ್ಯೂ.ಎಸ್.), ಸಣ್ಣ ಮಟ್ಟದ ಆದಾಯ ಹೊಂದಿದವರು (ಎಲ್.ಐ.ಜೆ), ಮಹಿಳೆಯರು, ವಿಧವೆಯರು, ಶುಚೀಕರಣ ವಲಯಗಳಲ್ಲಿ ದುಡಿಯುತ್ತಿರು ವವರು, ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರು, ವಿಕಲ ಚೇತನರು ಮತ್ತು ತೃತೀಯ ಲಿಂಗಿಗಳಿಗೆ ಈ ಯೋಜನೆಯಂತೆ ಆದ್ಯತೆ ನೀಡಲಾಗುವುಗದು. ಸ್ವಂತವಾಗಿ ಮನೆ ನಿರ್ಮಿಸಲು ಆರು ಲಕ್ಷ ತನಕದ ಸಾಲಕ್ಕೆ ಶೇ.೬.೫ರಷ್ಟು ಬಡ್ಡಿದರ ಸಬ್ಸಿಡಿ ನೀಡಲಾಗುವುದು. ರಾಜ್ಯ ಸರಕಾರದ ಸಹಾಯದೊಂದಿಗೆ ಈ ಯೋಜನೆ ಜ್ಯಾರಿಗೊಳಿಲಾಗುವುದು.

NO COMMENTS

LEAVE A REPLY