ಅಪ್ರಾಪ್ತ ಬಾಲಕಿಗೆ ಗರ್ಭದಾನ: ಆರೋಪಿ ಸೆರೆ

0
664

ಕುಂಬಳೆ: ಹದಿನೇಳರ ಹರೆಯದ ಬಾಲಕಿಯನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾದ  ಬಾಲಕಿಯನ್ನು ಮದುವೆಯಾಗದೆ ವಂಚಿಸಿದ ಪ್ರಕರಣದ ಆರೋಪಿಯನ್ನು ಕುಂಬಳೆ ಸಿ.ಐ ಕೆ.ಪಿ. ಸುರೇಶ್ ಬಾಬು ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಉಪ್ಪಳ ಕೋಡಿಬೈಲ್‌ನ ಮನೋಜ್.ಕೆ (೨೧) ಬಂಧಿತ ಯುವಕನಾಗಿದ್ದಾನೆ. ಈತ ಚಪ್ಪರ ನಿರ್ಮಾಣ ಕಾರ್ಮಿಕನಾಗಿದ್ದಾನೆ. ೨೦೧೫ ಮಾರ್ಚ್‌ನಲ್ಲಿ ಪಚ್ಲಂಪಾರೆ ಪರಿಸರದ  ಎಂಟನೇ ತರಗತಿ ವಿದ್ಯಾರ್ಥಿನಿ ನೆರೆಮನೆಗೆ ಟಿ.ವಿ. ವೀಕ್ಷಿಸಲೆಂದು ಹೋದ ವೇಳೆ  ಅಲ್ಲಿ ಮನೋಜ್ ಪರಿಚಯಗೊಂಡನು.   ಮದುವೆಯಾಗುವುದಾಗಿ ನಂಬಿಸಿ   ಮನೆಯಲ್ಲಿ ಯಾರೂ ಇಲ್ಲದ ಸಮಯನೋಡಿ   ತನಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿ ನಂತರ ಮದುವೆಯಾಗದೆ ವಂಚಿಸಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಲಕಿ ಆರೋಪಿಸಿದ್ದಳು. ಅದರಂತೆ ಪೊಲೀಸರು ಮನೋಜ್‌ನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

NO COMMENTS

LEAVE A REPLY