ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತ್ಯು

0
30

ಬಂದ್ಯೋಡು: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಅಮಿತ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಮುಟ್ಟಂ ಕುನ್ನಿಲ್ ನಿವಾಸಿ ಅಂದು ಮೋನ್ ಯಾನೆ ಅಬ್ದುಲ್ ರಹಿಮಾನ್(೫೫) ಎಂಬವರು  ಮೃತ ವ್ಯಕ್ತಿಯಾಗಿದ್ದಾರೆ.

ನಿನ್ನೆ ರಾತ್ರಿ ೭.೩೦ಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಟ್ಟಂ ರೇಶನ್ ಅಂಗಡಿ ಬಳಿ ಅಪಘಾತ ಸಂಭವಿಸಿದೆ. ಮೊಮ್ಮಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರ ಮನೆಗಳಿಗೆ ತಲುಪಿಸಿ ಮರಳುತ್ತಿದ್ದ ಅಂದು ಮೋನ್ ರಸ್ತೆ ದಾಟಲೆಂದು ಹೆದ್ದಾರಿ ಬದಿ ನಿಂತಿದ್ದರು. ಈ ವೇಳೆ ಬೇರೊಂದು ವಾಹನವನ್ನು ಹಿಂದಿಕ್ಕೆ ಚಲಿಸಿದ  ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಅಂದು ಮೋನ್‌ರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಉಪ್ಪಳದ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವು ಸಂಭವಿಸಿದೆ.

ಅಪಘಾತದ ಸೃಷ್ಟಿಸಿದ ಕಾರನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಖದೀಜ, ಮಕ್ಕಳಾದ ಮೊಹಮ್ಮದ್, ಸಿದ್ದಿಕ್, ಸುಬೈದ, ಸುಹರ, ಅಸ್ಯುಮ್ಮ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY