ಸರ್ವಪಕ್ಷ ಸಭೆ ಆರಂಭ: ಚುನಾವಣೆ ಮುಂದೂಡಿಕೆಗೆ ಎಡರಂಗ, ಬಿಜೆಪಿ ವಿರೋಧ

0
402

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲು ರಾಜ್ಯ ಚುನಾವಣಾ ಆಯೋಗ ಕರೆದ ಸರ್ವಪಕ್ಷ ಸಭೆ ತಿರುವನಂತಪುರದ  ತೈಕಾಡ್ ಸರಕಾರಿ ಅತಿಥಿಗೃಹದಲ್ಲಿ ರಾಜ್ಯ ಚುನಾವಣಾ ಆಯುಕ್ತರ ಸಾನಿಧ್ಯದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ.

ಇದೇ ವೇಳೆ ಚುನಾವಣೆಯನ್ನು ಮುಂದೂಡುವ ಯತ್ನಕ್ಕೆ ಎಡರಂಗ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ನವೆಂಬರ್ ೧ರಂದು ಹೊಸ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರುವ ರೀತಿಯಲ್ಲಿ ಅಕ್ಟೋಬರ್ ತಿಂಗಳಲ್ಲೇ ಚುನಾವಣೆ ನಡೆಸಬೇಕೆಂಬ ಅಚಲ ನಿಲುವನ್ನು ಎಡರಂಗ  ಮತ್ತು ಬಿಜೆಪಿ ಮುಂದಿರಿಸಿದೆ. ಚುನಾವಣೆಯನ್ನು ನವೆಂಬರ್ ತಿಂಗಳಿಗೆ ವಿಸ್ತರಿಸಿ, ಆ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಂದು ತಿಂಗಳಿಗೆ ಅಡ್ಮಿನಿಸ್ಟ್ರೇಟಿವ್ ಆಡಳಿತೆ ಹೇರುವುದನ್ನು ಸುತರಾಂ ಅಂಗೀಕರಿಸುವಂತಿಲ್ಲವೆಂದೂ ಈ ಎರಡು ವಿಪಕ್ಷಗಳು ಸ್ಪಷ್ಟಪಡಿಸಿವೆ. ಇಂದಿನ ಈ ಸರ್ವಪಕ್ಷ ಸಭೆ ಬಳಿಕ ಚುನಾವಣಾ ದಿನಾಂಕವನ್ನು ಇಂದೇ ಘೋಷಿಸಿ ಚುನಾವಣಾ ನೀತಿ ಸಂಹಿತೆಯನ್ನೂ ಜ್ಯಾರಿಗೊಳಿಸ ಬೇಕೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲ ಕೃಷ್ಣನ್ ಆಗ್ರಹಪಟ್ಟಿದ್ದಾರೆ. ಅಕ್ಟೋಬರ್ ತಿಂಗಳಲ್ಲೇ ಚುನಾವಣೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗ ಹೊಂದಿದೆ. ಚುನಾವಣೆಯನ್ನು ಮುಂದೂ ಡಿದಲ್ಲಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಚುನಾವಣೆಯನ್ನೂ ಮುಂದೂಡಿ, ಆ ಮೂಲಕ ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ಅಡ್ಮಿನಿಸ್ಟ್ರೇಟಿವ್ ಆಡಳಿತೆ ಹೇರಿದಲ್ಲಿ ಮತದಾರ ಯಾದಿಯಲ್ಲೂ ಅವ್ಯವಹಾರ ನಡೆಸುವ ಸಾಧ್ಯತೆ ಇದೆ. ಹಾಗೆ ನಡೆಯದಂತೆ ಅಕ್ಟೋಬರ್ ತಿಂಗಳಲ್ಲೇ ಚುನಾವಣೆ ನಡೆಸ ಬೇಕೆಂದು ಕೊಡಿಯೇರಿ ಒತ್ತಾಯಿಸಿದ್ದಾರೆ.

ಆದರೆ ಹೊಸದಾಗಿ ರೂಪೀಕರಿಸ ಲಾದ ೨೮ ನಗರಸಭೆಗಳು ಮತ್ತು ಕಣ್ಣೂರು ಕಾರ್ಪರೇಷನ್‌ಗಳಿಗೂ ಚುನಾವಣೆ ನಡೆಸುವ ರೀತಿಯಲ್ಲಿ ಚುನಾವಣೆಯನ್ನು ನವೆಂಬರ್ ತಿಂಗಳಿಗೆ ಮುಂದೂಡ ಬೇಕೆಂಬ ದೃಢ ನಿಲುವನ್ನು ಯುಡಿಎಫ್ ಕೂಡಾ ಮುಂದಿರಿಸಿದೆ.

ನವೆಂಬರ್ ತಿಂಗಳಲ್ಲಿ ಶಬರಿಮಲೆ ತೀರ್ಥಾಟನಾ  ಋತು ಆರಂಭಗೊಳ್ಳ ಲಿದೆ. ಆ ಹಿನ್ನೆಲೆಯಲ್ಲಿ ಅದರ ಮೊದಲಾಗಿ ಚುನಾವಣೆ ನಡೆಸಬೇಕೆಂಬ ಪ್ರಬಲ ಬೇಡಿಕೆಯನ್ನು ಬಿಜೆಪಿಯೂ ಮುಂದಿರಿಸಿದೆ. ಚುನಾವಣೆಯನ್ನು ಮುಂದೂಡುವ ಮೂಲಕ ಅದನ್ನು ಬುಡಮೇಲುಗೊಳಿಸಲು ಸರಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಚುನಾವಣೆ ನಡೆಸುವ ಬಗ್ಗೆ ಆಡಳಿತ ಮತ್ತು ವಿಪಕ್ಷಗಳು ತೀವ್ರ ಭಿನ್ನ ನಿಲುವು ಹೊಂದಿರುವುದು ಚುನಾವಣಾ ಆಯೋಗಕ್ಕೆ ಒಂದು ಹೊಸ ತಲೆನೋವು ಸೃಷ್ಟಿಸತೊಡಗಿದೆ. ಇದು ಚುನಾವಣಾ ದಿನಾಂಕ ಘೋಷಣೆಯನ್ನು ಬಿಕ್ಕಟ್ಟಿನಲ್ಲಿ ಸಿಲುಕುವಂತೆಯೂ ಮಾಡಿದೆ.

NO COMMENTS

LEAVE A REPLY