ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಬೆಂಗಳೂರು ಕೇಂದ್ರೀಕರಿಸಿ ತನಿಖೆ

0
548

ಕಾಸರಗೋಡು: ಎರಿಯಾಲ್ ನಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಿನ್ನೆ ನಡೆದ  ದರೋಡೆ ಪ್ರಕರಣದ ತನಿಖೆಯನ್ನು ಪೊಲೀಸರು ಬೆಂಗಳೂರು ಸಹಿತ ಕರ್ನಾಟಕದ ವಿವಿಧೆಡೆಗೆ ವಿಸ್ತರಿಸಿದ್ದಾರೆ.

ನಿನ್ನೆ ಮಧ್ಯಾಹ್ನ ೨.೧೫ರ ವೇಳೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಎರಿಯಾ ಲ್‌ನ ಎರಡು ಅಂತಸ್ತು ಕಟ್ಟಡದ ಮೇಲಿನ ಅಂತಸ್ತಿನಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ.

ಈ ಬ್ಯಾಂಕ್‌ನಲ್ಲಿ ನಿನ್ನೆ ಹೆಡ್ ಕ್ಲಾರ್ಕ್ ಸಚ್ಚಿದಾನಂದ, ಕ್ಯಾಶಿಯರ್ ಲಕ್ಷ್ಮಿ ಮತ್ತು ಇನ್ನೋರ್ವ ಸಿಬ್ಬಂದಿ ಬಿಂದು ಮಾತ್ರವೇ ಕರ್ತವ್ಯದಲ್ಲಿದ್ದರು. ಸಚ್ಚಿದಾನಂದ ಮಧ್ಯಾಹ್ನ ಊಟಕ್ಕೆ ಹೊರಗೆ ಹೋಗಿದ್ದರು. ಆ ವೇಳೆ ಕ್ಯಾಶಿಯರ್ ಲಕ್ಷ್ಮಿ ಮತ್ತು ಬಿಂದು  ಬ್ಯಾಂಕ್‌ನಲ್ಲಿದ್ದರು. ಮಧ್ಯಾಹ್ನ ಮಂಜತ್ತಡ್ಕದ ಖಮರ್ ಭಾನು ಚಿನ್ನ ಅಡವಿರಿಸಿ ಸಾಲ ಪಡೆಯಲು ಬ್ಯಾಂ ಕ್‌ಗೆ ಬಂದಿದ್ದರು. ಅವರು   ವ್ಯವಹಾರದಲ್ಲಿ ತೊಡಗಿದ್ದಾಗ  ೨.೧೫ರ ವೇಳೆ ಮುಖವಾಡ ಧರಿಸಿ ಮತ್ತು ಕೈಗಳಿಗೆ ಗ್ಲೌಸ್ ಧರಿಸಿಕೊಂಡ ನಾಲ್ವರು ದರೋಡೆಕೋರರು ಮಿಂಚಿನಂತೆ ಬ್ಯಾಂಕ್‌ನೊಳಗೆ ಬಂದು ಖಮರ್ ಭಾನುವಿನ ಕುತ್ತಿಗೆಗೆ ಚಾಕು ಇರಿಸಿ ಬೆದರಿಕೆಯೊಡ್ಡಿ ಅವರ ಕೈಯಲ್ಲಿದ್ದ  ೨೫ ಪವನ್‌ನ ಚಿನ್ನದೊಡವೆಯನ್ನು ವಶಪಡಿಸಿಕೊಂಡಿದ್ದಾರೆ.  ಬಳಿಕ ಕ್ಯಾಶಿಯರ್ ಲಕ್ಷ್ಮಿಗೂ ಚಾಕು ತೋರಿಸಿ ಬೆದರಿಸಿದಾಗ  ಅದನ್ನು  ಕಂಡ ಬಿಂದು ಓಡಿ ಬಂದಾಗ ದರೋಡೆಕೋರರು ಆಕೆಯ ಮೇಲೂ ಚಾಕು ಬೀಸಿ ಆಕೆಯ ಕೈಗೆ ಗಾಯಗೊಳಿಸಿದರು.  ದರೋಡೆಕೋರರು ಸ್ಟ್ರಾಂಗ್ ರೂಮ್‌ನ ಕೀಲಿಗೊಂಚಲು ನೀಡುವಂತೆ ಲಕ್ಷ್ಮಿಗೆ ಚಾಕು ತೋರಿಸಿ ಮತ್ತೆ ಬೆದರಿಸಿದರು. ಆದರೆ ಲಕ್ಷ್ಮಿ ಅದಕ್ಕೆ ಹಿಂಜರಿದರು. ಆಗ  ಬಿಂದುವಿನ ಕುತ್ತಿಗೆಯಲ್ಲಿದ್ದ ಮೂರು ಪವನ್‌ನ ತಾಳಿಮಾಲೆಯನ್ನು ದರೋಡೆಕೋರರು ಕಸಿದೆಳೆಯುವುದನ್ನು ಕಂಡ ಲಕ್ಷ್ಮಿ ಪ್ರಜ್ಞೆ ತಪ್ಪಿ ಬಿದ್ದರು. ಆ ಸಮಯದಲ್ಲಿ ದರೋಡೆಕೋ ರರು   ಆಕೆಯ ಕೈಯನ್ನು ಹಿಂದೆ ಹಗ್ಗದಲ್ಲಿ ಬಿಗಿದು ದಿಗ್ಬಂಧನಗೊಳಿಸಿದರು. ನಂತರ  ಕೀಲಿ ಗೊಂಚಲು ಪಡೆದು ಸ್ಟ್ರಾಂಗ್ ರೂಮ್‌ನ ಬಾಗಿಲು ತೆಗೆದು ಅದರೊಳಗಿದ್ದ ೨೧ ಕಿಲೋ ೬೪೬ ಗ್ರಾಂ ಚಿನ್ನದೊಡವೆ ಮತ್ತು ೧೨ ಲಕ್ಷ ರೂ.ವನ್ನು ಮೂರು ಬ್ಯಾಗ್ ಗಳಲ್ಲಿ ತುಂಬಿಸಿ ಬ್ಯಾಂಕ್‌ನ ಸಿಬ್ಬಂದಿಗಳಾದ ಲಕ್ಷ್ಮಿ ಹಾಗೂ ಬಿಂದುವನ್ನು ಸ್ಟ್ರಾಂಗ್ ರೂಮ್‌ನೊಳಗೆ  ಕೂಡಿ ಹಾಕಿ ಬಾಗಿಲು ಮುಚ್ಚಿ ಹೊರಹೋಗಿ ಎರಡು ಬೈಕ್ ಗಳಲ್ಲಾಗಿ ಪರಾರಿಯಾದರೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಸ್ಟ್ರಾಂಗ್ ರೂಮ್ ನಲ್ಲಿ ಸಿಲುಕಿದ್ದ ಸಿಬ್ಬಂದಿಗಳಿಬ್ಬರನ್ನು ಬಳಿಕ ಖಮರ್ ಭಾನು ಬಾಗಿಲು ತೆಗೆದು ರಕ್ಷಿಸಿದ್ದರ. ಬಳಿಕ ಆಕೆ ಹೊರಬಂದು ಇತರರಿಗೆ ದರೋಡೆ ಬಗ್ಗೆ ಮಾಹಿತಿ ನೀಡಿದ್ದರು.  ಬಳಿಕ ಪೊಲೀ ಸರು ಆಗಮಿಸಿ ಪ್ರಜ್ಞೆ ಕಳೆದುಕೊಂಡ ಲಕ್ಷ್ಮಿಯನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದರು.  ಆ ವೇಳೆ ಅಲ್ಲಿ ಭಾರೀ ಜನಪ್ರವಾಹವೇ ಹರಿದುಬರತೊಡಗಿತು.

NO COMMENTS

LEAVE A REPLY