ಚಿಕಿತ್ಸೆಗೆ ಸಾಲ ಪಡೆಯಲು ಬಂದು ಸರ್ವ ಸಂಪಾದನೆ ಕಳೆದುಕೊಂಡ ಭಾನು

0
389

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಿನ್ನೆ ನಡೆದ ದರೋಡೆಯಲ್ಲಿ ಬ್ಯಾಂಕ್‌ನಲ್ಲಿ ಚಿನ್ನ ಅಡವಿರಿಸಿ ಸಾಲ ಪಡೆಯಲು ಬಂದ ಮಹಿಳೆಯ ೨೫ ಪವನ್ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ.

ಮಂಜತಡ್ಕ ನಿವಾಸಿ ಖಮರು ಭಾನು (೪೫) ಚಿನ್ನ ಕಳೆದುಕೊಂಡ ನತದೃಷ್ಟ ಮಹಿಳೆ. ಆಕೆಯ ಪತಿ ಅಬ್ದುಲ್ಲ ಶ್ವಾಸಕೋಶ ಸಂಬಂಧಿತ ಕಾಯಿಲೆ ಯಿಂದ ಬಳಲುತ್ತಿದ್ದು ಈಗ ಚಿಕಿತ್ಸೆ ಯಲ್ಲಿದ್ದಾರೆ. ಅವರಿಗೆ  ನಿರಂತರ ಆಮ್ಲಜನಕ ನೀಡಲಾಗುತ್ತಿದೆ.  ಈ ತಿಂಗಳ ೧೨ರಂದು ಆಸ್ಪತ್ರೆಯಲ್ಲಿ ದಾಖ ಲುಗೊಂಡ ಅವರಿಗೆ ಉನ್ನತಮಟ್ಟದ ಚಿಕಿತ್ಸೆ   ನೀಡಲು ವೈದ್ಯರು ಸಲಹೆ ನೀಡಿದ್ದರು. ಪತಿಯ ಚಿಕಿತ್ಸೆಗಾಗಿ ಭಾನು ತನ್ನ ಮತ್ತು ಹೆಣ್ಣು ಮಕ್ಕಳಿಂದ ಪಡೆದ ೨೫ ಪವನ್ ಚಿನ್ನದೊಂದಿಗೆ ನಿನ್ನೆ ಮಧ್ಯಾಹ್ನ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಡವಿರಿಸಿ ೨.೫ ಲಕ್ಷ ರೂ. ಸಾಲ ಪಡೆ ಯಲು ಬಂದಿದ್ದರು. ಆ ಚಿನ್ನವನ್ನು ಬ್ಯಾಂಕ್‌ನಲ್ಲಿ ತೂಕ ಮಾಡಿ   ರಶೀದಿ ಯನ್ನು ಭಾನುರ ಕೈಗೆ ನೀಡುವಷ್ಟರಲ್ಲಿ ದರೋಡೆಕೋರರು ಮಿಂಚಿನಂತೆ ಬ್ಯಾಂಕ್‌ನೊಳಗೆ ನುಗ್ಗಿ ಭಾನುರನ್ನು ಹಿಡಿದು ಆಕೆಯ ಕುತ್ತಿಗೆ  ಬಿಗಿದು ಪ್ರಾಣ ಬೆದರಿಕೆಯೊಡ್ಡಿ ಆಕೆಯ ಕೈಯಲ್ಲಿದ್ದ ಚಿನ್ನವನ್ನು ದರೋಡೆಗೈದಿದ್ದಾರೆ.

NO COMMENTS

LEAVE A REPLY