ಗ್ರಾಹಕರು, ಊರವರಿಂದ ಬ್ಯಾಂಕ್ ಮುಂದೆ ಪ್ರತಿಭಟನೆ

0
357

ಕಾಸರಗೋಡು: ಎರಿಯಾ ಲ್‌ನಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಮೊನ್ನೆ ನಡೆದ ದರೋಡೆಗೆ ಸಂಬಂಧಿಸಿ ಊರವರು ನಿನ್ನೆ ಬ್ಯಾಂಕ್‌ನ ಮುಂದೆ ಜಮಾಯಿಸಿ ತೀವ್ರಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ನಡೆಸಿದವರಲ್ಲಿ ಹೆಚ್ಚಿನವರು ಆ ಬ್ಯಾಂಕ್‌ನ ಗ್ರಾಹಕರೇ ಆಗಿದ್ದಾರೆ. ದರೋಡೆಯಿಂದಾಗಿ ಆ ಬ್ಯಾಂಕ್‌ನಲ್ಲಿರಿಸಲಾಗಿದ್ದ ನಗ-ನಗದು ಕಳೆದುಕೊಂಡ ಗ್ರಾಹಕರಿಗೆ ನಷ್ಟಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿರಿಸಿ ಕೊಂಡು ಊರವರು ಪ್ರತಿಭಟನೆ ನಡೆಸಿದರು. ನಷ್ಟಗೊಂಡ ತಮ್ಮ ನಗ-ನಗದು ಮತ್ತೆ ಲಭಿಸುವ ಖಚಿತ ಭರವಸೆ ಲಭಿಸದೆ ತಾವು ಇಲ್ಲಿಂದ ಹಿಂತಿರುಗೆವೆಂದು ಪ್ರತಿಭಟನೆಗಾರರು ತಿಳಿಸಿದರು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರೂ ಒಳಗೊಂಡಿದ್ದರು. ಪ್ರತಿಭಟನಾಕಾರರು ಅಲ್ಲೇ ಸಮೀಪದ ರಾಷ್ಟ್ರೀಯ ಹೆದ್ದಾರಿ ತಡೆಗೂ ಯತ್ನಿಸಿದ್ದು ಪೊಲೀಸರ ಸಕಾಲಿಕ ಕ್ರಮದಿಂದ ಅದು ವಿಫಲವಾಯಿತು.

ಬಳಿಕ ಗ್ರಾಹಕರ ಪ್ರತಿನಿಧಿಗಳು ಮತ್ತು ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆಗ ನಷ್ಟಪರಿಹಾರ ನೀ ಡುವ ಬಗ್ಗೆ  ಈ ತಿಂಗಳ ೧೮ರಂದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳ ಲಾಗುವುದೆಂದು ಬ್ಯಾಂಕ್‌ಗೆ ಸಂಬಂಧ ಪಟ್ಟವರು ತಿಳಿಸಿದಾಗ ಪ್ರತಿಭಟ ನಾಕಾರರು ಅಲ್ಲಿಂದ ತೆರಳಿದರು.

NO COMMENTS

LEAVE A REPLY