ಕೂಡ್ಲು ಬ್ಯಾಂಕ್ ದರೋಡೆ: ಆರೋಪಿಗಳ ಸ್ಪಷ್ಟ ಚಿತ್ರಣ ಲಭ್ಯ, ಓರ್ವ ಪೊಲೀಸ್ ಕಸ್ಟಡಿಗೆ

0
388

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಈ ತಿಂಗಳ ೭ರಂದು ಹಗಲಿನಲ್ಲಿ ನಡೆದ ದರೋಡೆಯಲ್ಲಿ ಓರ್ವ ಸ್ಥಳೀಯನ ಸಹಾಯವೂ ದರೋಡೆಕೋರ ರಿಗೆ ಲಭಿಸಿದೆಯೆಂಬ ಸ್ಪಷ್ಟ ನಿಗಮ ನಕ್ಕೆ ಪೊಲೀಸರು ಬಂದಿದ್ದಾರೆ. ದರೋಡೆ ನಡೆಸಿದ ಬಗ್ಗೆ ಪೊಲೀಸರಿಗೆ ಈಗಾಗಲೇ ಸ್ಪಷ್ಟ ಮಾಹಿತಿ ಲಭಿಸಿದೆ.

ಸ್ಥಳೀಯ  ವ್ಯಕ್ತಿಗಳ ಸಹಾಯವಿಲ್ಲದೆ ಬ್ಯಾಂಕ್ ದರೋಡೆ ನಡೆಸಲು ಸಾಧ್ಯವಾ ಗದು, ಮಾತ್ರವಲ್ಲ ದರೋಡೆಕೋರರು ಬ್ಯಾಂಕ್‌ನಿಂದ ಕದ್ದ ಮಾಲನ್ನು ದರೋಡೆ ಕೋರರು ಜಿಲ್ಲೆಯಿಂದ ಹೊರಗೆ ಅಷ್ಟು ಸುಲಭವಾಗಿ ಸಾಗಿಸುವಂತೆಯೂ ಇಲ್ಲ. ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ಜಿಲ್ಲೆಯಾದ್ಯಂತ ಮಾತ್ರವಲ್ಲ ಕರ್ನಾಟಕಕ್ಕೂ ತನಿಖೆ ವಿಸ್ತರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕದ್ದ ಮಾಲುಗಳನ್ನು ಜಿಲ್ಲೆಯ ಎಲ್ಲಿಯಾದರೂ ಬಚ್ಚಿಟ್ಟಿರಬಹುದೆಂದು  ಪೊಲೀಸರು ಸಂಶಯಿಸುತ್ತಿದ್ದಾರೆ. ಆರೋಪಿ ಗಳನ್ನು ಶೀಘ್ರ ಬಂಧಿಸಲು ಸಾಧ್ಯವಾಗ ಲಿದೆಯೆಂಬ ಶುಭ ನಿರೀಕ್ಷೆಯನ್ನೂ ಇದೇ ಸಂದರ್ಭದಲ್ಲಿ  ಪೊಲೀಸರು ವ್ಯಕ್ತಪಡಿಸಿ ದ್ದಾರೆ. ಬ್ಯಾಂಕ್ ದರೋಡೆಗೈದ ಬಳಿಕ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಇಬ್ಬರು ದಿಢೀರ್ ಅಪ್ರತ್ಯಕ್ಷರಾಗಿರುವ ಬಗ್ಗೆ  ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅದರಿಂದಾಗಿ ದರೋಡೆಯಲ್ಲಿ ಯಾರಾ ದರೂ ಸ್ಥಳೀಯನ ಕೈವಾಡವಿದೆಯೆಂದು ಪೊಲೀಸರು ಶಂಕಿಸಲು ಪ್ರಧಾನ ಕಾರಣ ವಾಗಿದೆ. ಅಪ್ರತ್ಯಕ್ಷರಾದ   ಇಬ್ಬರನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ.   ಶಂಕಿತ ವ್ಯಕ್ತಿಯ ರೇಖಾ ಚಿತ್ರವನ್ನು ಸಾಕ್ಷಿದಾರನ ಸಹಾಯದಿಂದ ಪೊಲೀಸರು ಆರ್ಟಿಸ್ಟ್‌ನ ಮೂಲಕ ತಯಾರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.ಈ ಮಧ್ಯೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದು ಪ್ರಶ್ನಿಸುತ್ತಿದ್ದಾರೆ. ಬ್ಯಾಂಕ್  ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಅಳವಡಿಸಿದ ಸಿಸಿ ಕ್ಯಾಮರಾ ಟಿವಿ  ದರೋಡೆ ನಡೆಯುವ ದಿನ ಹಾಳಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

NO COMMENTS

LEAVE A REPLY