ಕದ್ದ ಮಾಲು ಬಚ್ಚಿಟ್ಟ ಶಂಕೆ: ಚೌಕಿ ಬಳಿ ನಿರ್ಜನ ಪ್ರದೇಶ ಜಾಲಾಡಿದ ಪೊಲೀಸರು

0
347

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರ ಣಕ್ಕೆ ಸಂಬಂಧಿಸಿ ಪೊಲೀಸರು  ಚೌಕಿ ಬಳಿಯ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕಾಡುಪೊದೆಗಳಿಂದ ಆವೃತವಾಗಿರುವ ನಿರ್ಜನ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನದಿಂದ ಇಂದು ಮುಂಜಾನೆ ೩ ಗಂಟೆ ತನಕ ಎಲ್ಲೆಡೆಗಳಲ್ಲಿ ಜಾಲಾಡಿ ವ್ಯಾಪಕ ಶೋಧ ನಡೆಸಿದ್ದಾರೆ. ದರೋಡೆಕೋರರು ಕದ್ದ ಮಾಲನ್ನು ಈ ನಿರ್ಜನ ಹಿತ್ತಿಲಲ್ಲಿ ಬಚ್ಚಿಟ್ಟಿ ರಬಹುದೆಂಬ ಮಾಹಿತಿ ಪೊ ಲೀಸರಿಗೆ ಲಭಿಸಿತ್ತು. ಅದರಂತೆ ಅಲ್ಲಿ ಶೋಧ ನಡೆಸಲಾಗಿದೆ. ಆದರೆ ಶೋಧ ಕಾರ್ಯಾಚರಣೆಯಲ್ಲಿ  ಏನೂ ಪತ್ತೆಯಾಗಲಿಲ್ಲ. ದರೋಡೆ ನಡೆದ ದಿನದಂದು ಕದ್ದ ಮಾಲನ್ನು ದರೋಡೆಕೋರರು ಈ ಹಿತ್ತಿಲಲ್ಲಿ ಬಚ್ಚಿಟ್ಟಿರಬಹುದೆಂದೂ, ಮರುದಿನ ಅದನ್ನು ಬೇರೆಡೆಗೆ ಸಾಗಿಸಿರ ಬಹುದೆಂದೂ ಪೊಲೀಸರು ಶಂಕಿಸು ತ್ತಿದ್ದಾರೆ.

NO COMMENTS

LEAVE A REPLY