ಶಾಲೆ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನ

0
188

ಮುಳ್ಳೇರಿಯ: ರಕ್ಷಕರು ಹಾಗೂ ಶಾಲೆ ಅಧಿಕಾರಿಗಳ ಕಣ್ಮುಂದೆಯೇ ಶಾಲೆಯೊಂದರ ಒಂದನೇ ಅಂತಸ್ತಿನಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನಿಸಿದ ಘಟನೆ ನಡೆದಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.  ಘಟನೆ ವಿದ್ಯಾರ್ಥಿಗಳು, ನಾಗರಿಕರು ಹಾಗೂ ಪೊಲೀಸರು ತಿಳಿದಿದ್ದರೂ ದೂರು ಅಗತ್ಯವಿಲ್ಲವೆಂದು ಎಲ್ಲರೂ ಸೇರಿ ತೀರ್ಮಾನಿಸಿದ್ದಾರೆ.

ಇದೇ ವೇಳೆ ಯಾರಿಂದಲೂ ದೂರು ಲಭಿಸದ ಹಿನ್ನೆಲೆಯಲ್ಲಿ ಪೊಲೀಸರು ಆ ಕ್ರಮದಿಂದ ಹಿಂಜರಿದರು.  ಪ್ರೀತಿ ಸಂಬಂಧ ವಿಷಯವೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ಶಾಲಾ ಅಧಿಕಾರಿಗಳು  ಮನೆಯವರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಂತೆ ವಿದ್ಯಾರ್ಥಿನಿ ತನ್ನ ಪ್ರೀತಿಯ ಬಗ್ಗೆ ಪುನರುಚ್ಛರಿಸಿದ್ದಾಳೆ. ಹಾಗಾದರೆ ತಾವು ಕುಟುಂಬ ಸಮೇತ ಆತ್ಮಹತ್ಯೆ ಗೈಯ್ಯುವ ಬಗ್ಗೆ ಆಲೋಚಿಸುವುದಾಗಿ ಸಂಬಂಧಿಕರಲ್ಲೋರ್ವ ತಿಳಿಸಿದಾಗ ಬಾಲಕಿ ಶಾಲೆ ಕಟ್ಟಡದಿಂದ ಕೆಳಕ್ಕೆ ಹಾರಿದಳೆಂದು ಹೇಳಲಾಗುತ್ತಿದೆ. ಆದರೆ ಯಾವುದೇ ಗಾಯ ಗಳಿಲ್ಲದೆ ಆಕೆ ಅಪಾಯದಿಂದ ಪಾರಾಗಿದ್ದಾಳೆ.

NO COMMENTS

LEAVE A REPLY