ಬ್ಯಾಂಕ್ ದರೋಡೆಗೆ ಮೊದಲು ಕಲ್ಲಂಗೈಗೆ ಐವರು ಬೈಕ್ನಲ್ಲಿ ಬಂದ ಬಗ್ಗೆ ಮಾಹಿತಿ

0
303

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ನಡೆದ ದಿನದಂದು ದರೋಡೆ ನಡೆಯುವ ಒಂದು ತಾಸಿನ ಮೊದಲು ಎರಡು  ಬೈಕ್‌ಗಳಲ್ಲಾಗಿ ಐವರು ಮಂದಿ ಕಲ್ಲಂಗೈ ಚಂದ್ರಗಿರಿ ಅತಿಥಿಗೃಹದ ಬಳಿ ಸಂಶಯಾಸ್ಪದ ರೀತಿಯಲ್ಲಿ ನಿಂತಿರುವುದನ್ನು ಕೆಲವರು ಕಂಡಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಂದು ಮಧ್ಯಾಹ್ನ ೧.೩೦ಕ್ಕೆ ಈ ಐದು ಮಂದಿ ಎರಡು ಬೈಕ್‌ಗಳಲ್ಲಾಗಿ ಕಲ್ಲಂಗೈ ಬಳಿಯ ರಸ್ತೆ ಬಳಿ ನಿಂತಿದ್ದರು. ಆಗ ಅವರ ಮೊಬೈಲ್‌ಗೆ ಫೋನ್ ಸಂದೇಶ ಬಂದಿತ್ತು. ಅದು ಬಂದಕ್ಷಣ ಆ ಐದು ಮಂದಿ ಎರಡು ಬೈಕ್‌ಗಳಲ್ಲಾಗಿ ಶರವೇಗದಲ್ಲಿ ಅಲ್ಲಿಂದ ಸಾಗಿದ್ದರು. ಅವರು ಸಾಗಿದ ಅರ್ಧ ತಾಸಿನೊಳಗಾಗಿ ಬ್ಯಾಂಕ್ ದರೋಡೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಬೈಕ್‌ಗಳಲ್ಲಾಗಿ ಬಂದು ಕಾದು ನಿಂತಿದ್ದವರು ದರೋಡೆಕೋರರಾಗಿರಬಹುದೇ ಎಂಬ ಶಂಕೆಯೂ ಪೊಲೀಸರಲ್ಲಿ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಆ ವ್ಯಕ್ತಿಗಳನ್ನು ಅಲ್ಲಿ ಕಂಡವರಿಂದಲೂ ಪೊಲೀಸರು ಮಾಹಿತಿ ಪಡೆದು ಅದರ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY