ಬಿಜೆಪಿ ನೇತಾರ, ಹೋಟೆಲ್ ಮಾಲಕ ನಿಧನ

0
713

ಬದಿಯಡ್ಕ: ಬಿಜೆಪಿ ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷರೂ, ಹೋಟೆಲ್ ಮಾಲಕನಾಗಿದ್ದ ಕುಶಲ (೬೮) ಎಂಬವರು ನಿಧನಹೊಂದಿ ದರು. ಈಹಿಂದೆ ಪೆರ್ಲ ನಿವಾಸಿಯಾ ಗಿದ್ದ ಇವರು ಇದೀಗ ಮಂಗಳೂರು ಕಾವೂರಿನಲ್ಲಿ ವಾಸವಾಗಿದ್ದರು. ಈಹಿಂದೆ ಪೆರ್ಲ ಹಾಗೂ ಮುಳ್ಳೇರಿ ಯ ಪೇಟೆಯಲ್ಲಿ ಹೋಟೆಲ್ ಮಾಲಕನಾಗಿದ್ದರು. ಅಸೌಖ್ಯದ ಹಿನ್ನೆಲೆಯಲ್ಲಿ ಹೋಟೆಲ್ ವ್ಯಾಪಾರ ತೊರೆದಿದ್ದರು. ಶ್ರೀ ಅಯ್ಯಪ್ಪ ಗುರುಸ್ವಾಮಿಯೂ ಆಗಿದ್ದರು.  ಮೃತರು ಪತ್ನಿ ಪುಷ್ಪಲತಾ, ಮಕ್ಕಳಾದ ಶ್ರುತಿ, ಶ್ರವಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಶೋಕ ವ್ಯಕ್ತಪಡಿಸಿ ಮುಳ್ಳೇರಿಯದಲ್ಲಿ ನಿನ್ನೆ ವ್ಯಾಪಾರಿಗಳು ಹರತಾಳ ಆಚರಿಸಿದರು.

NO COMMENTS

LEAVE A REPLY