ಕಿಡ್ನಿ ಅಸೌಖ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು

0
201

ಮಂಜೇಶ್ವರ: ಎಂಟು ವರ್ಷಗಳಿಂದ ಕಿಡ್ನಿ ಅಸೌಖ್ಯದಿಂದ ಬಳಲುತ್ತಿದ್ದ ಯುವಕ ಮೃತಪಟ್ಟರು.

ಉದ್ಯಾವರ ಮಾಡ ಮಾಳಿಗೆ ಮನೆ ನಿವಾಸಿ ದಿ| ಸುಬ್ಬ ಬೆಳ್ಚಪ್ಪಾಡ- ದಿ| ಪ್ರೇಮಾ ದಂಪತಿಯ ಪುತ್ರ ಪ್ರಮೋದ್ (೩೪) ಮೃತ ಯುವಕನಾಗಿದ್ದಾರೆ. ಪೈಂಟಿಂಗ್ ಕಾರ್ಮಿಕನಾಗಿದ್ದ ಪ್ರಮೋದ್‌ಗೆ ಎಂಟು ವರ್ಷಗಳಿಂದ ಕಿಡ್ನಿ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆರಡು ಬಾರಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ತಲುಪಿದಾಗ ಅಸೌಖ್ಯ ಉಲ್ಬಣಗೊಂಡು ಮೃತಪಟ್ಟರು.

ಮೃತದೇಹವನ್ನು ಮನೆಗೆ ತಂದು ಅಂತಿಮ ನಮನದ ಬಳಿಕ ಉದ್ಯಾವರ ಮಾಡ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಸಹೋದರ- ಸಹೋದರಿಯರಾದ ಸತೀಶ, ವಿನೋದ, ಮಹೇಶ, ಮಲ್ಲಿಕ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

 

NO COMMENTS

LEAVE A REPLY