ಶಾಲೆ ಕಂಪೌಂಡ್ ಜಿಗಿದು ಪ್ಲಸ್ಟು ವಿದ್ಯಾರ್ಥಿನಿಯನ್ನು ಅಪಹರಿಸಿ ಕಿರುಕುಳಕ್ಕೆತ್ನ: ಆರೋಪಿಯ ಬೆನ್ನಟ್ಟಿ ಸೆರೆ

0
67

ಬದಿಯಡ್ಕ: ಶಾಲೆ ಕಂಪೌಂಡ್ ಜಿಗಿದು ಒಳನುಗ್ಗಿದ ಯುವಕನೋರ್ವ ಪ್ಲಸ್‌ಟು ವಿದ್ಯಾರ್ಥಿನಿಯನ್ನು ಬಲವಂತವಾಗಿ ಪಾಯಿಖಾನೆಗೆ ಕರೆದೊಯ್ದು  ಕಿರುಕುಳ ನೀಡಲೆತ್ನಿಸಿದ ಘಟನೆ ನಡೆದಿದೆ. ಬಾಲಕಿಯ ಬೊಬ್ಬೆ ಕೇಳಿ ತಲುಪಿದ ಅಧ್ಯಾಪಕರು ಹಾಗೂ ನಾಗರಿಕರು ಸೇರಿ ಪಾಯಿಖಾನೆಯ ಬಾಗಿಲು ಮುರಿದು ಬಾಲಕಿಯನ್ನು ರಕ್ಷಿಸಿದರು. ಸ್ಥಳದಿಂದ ಓಡಿ ಪರಾರಿ ಯಾಗಲೆತ್ನಿಸಿದ ಆರೋಪಿಯನ್ನು ಬೆನ್ನಟ್ಟಿ ಸೆರೆಹಿಡಿದು ತಕ್ಕ ಶಾಸ್ತಿ ಮಾಡಿದ ಬಳಿಕ ಪೊಲೀಸರಿಗೆ  ಹಸ್ತಾಂತರಿ ಸಲಾಯಿತು.

ಬದಿಯಡ್ಕ-ಮುಳ್ಳೇರಿಯ ನಿವಾಸಿಯೂ, ನಾಲ್ಕು ದಿನ ಹಿಂದೆ ಗಲ್ಫ್‌ನಿಂದ ಊರಿಗೆ ಬಂದ ಸಿದ್ದಿಕ್ (೩೨) ಎಂಬಾತ ಸೆರೆಗೀಡಾದ ಆರೋಪಿ ಯಾಗಿದ್ದಾನೆ. ಈತನ ವಿರುದ್ಧ ಮಾನ ಭಂಗಯತ್ನಕ್ಕೆ ಕೇಸು ದಾಖಲಿಸಿ ಕೊಂಡಿರುವುದಾಗಿಯೂ ಇಂದು ಬಂಧನ ದಾಖಲಿಸುವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ಐದು ಗಂಟೆ ವೇಳೆ ನಡೆದ ಈ ಘಟನೆ ಬಗ್ಗೆ ಶಾಲೆ ಅಧಿಕಾರಿಗಳು, ನಾಗರಿಕರು ಹಾಗೂ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ: “ಬದಿಯಡ್ಕ ಪೇಟೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬಾಲಕಿಯ ಮನೆಯಿದೆ. ಈಕೆ ಕಾಸರ ಗೋಡು ಬಳಿ ಖಾಸಗಿ ಸಂಸ್ಥೆಯೊಂದರ ಪ್ಲಸ್‌ಟು ವಿದ್ಯಾರ್ಥಿನಿಯಾಗಿದ್ದಾಳೆ. ತರಗತಿ ಮುಗಿದ ಬಳಿಕ ತಂದೆ ಅಧ್ಯಾಪಕನಾಗಿ ಕೆಲಸ ನಿರ್ವಹಿಸುವ ಬದಿಯಡ್ಕದ ಶಾಲೆಗೆ ತಲುಪುವಳು. ನಿತ್ಯ ಸಂಜೆ ಜತೆಯಾಗಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು.

ನಿನ್ನೆ ಸಂಜೆ ತರಗತಿ ಮುಗಿದು ತಂದೆಯ ಶಾಲೆಗೆ ಬಾಲಕಿ ತಲುಪಿದ್ದಳು. ತರಗತಿ ಮುಗಿದ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಮನೆಗೆ ಮರಳಿದ್ದರು. ಸ್ಟಾಫ್ ಮೀಟಿಂಗ್ ಇದ್ದುದರಿಂದ ತಂದೆ ಪುತ್ರಿಯಲ್ಲಿ ವರಾಂಡದಲ್ಲಿ ಕುಳಿತುಕೊಳ್ಳಲು ತಿಳಿಸಿದ್ದರು. ಈಮಧ್ಯೆ ನಾಲ್ಕು ದಿನಗಳ ಹಿಂದೆ ಗಲ್ಪ್‌ನಿಂದ ಊರಿಗೆ ಬಂದ ಸಿದ್ದಿಕ್ ಶಾಲೆಯ ಕಂಪೌಂಡ್ ಹಾರಿ ಬಾಲಕಿ ಬಳಿಗೆ ತಲುಪಿದ್ದಾನೆ. ಕೂಡಲೇ ಬಾಲಕಿಯ ಬಾಯಿಯನ್ನು ಬಲವಾಗಿ ಹಿಡಿದು ಪಾಯಿಖಾನೆಗೆ ಕರೆದೊಯ್ದಿದ್ದಾನೆ. ಒಳಗಿನಿಂದ ಬಾಗಿಲು ಮುಚ್ಚಿದ ಬಳಿಕ ಕಿರುಕುಳ ನೀಡಲೆತ್ನಿಸಿದ್ದಾನೆ. ಬಾಲಕಿ ಬೊಬ್ಬೆ  ಹಾಕಿದಾಗ ಶಾಲೆ ಪರಿಸರದ ರಸ್ತೆಯಲ್ಲಾಗಿ ನಡೆದು ಹೋಗುತ್ತಿದ್ದವರ ಗಮನಕ್ಕೆ  ಬಂದಿದೆ. ಸಂಶಯಗೊಂಡು  ಶಾಲೆಗೆ ತಲುಪಿದ ಅವರು ಸಭೆಯಲ್ಲಿ ಭಾಗವಹಿಸಿದ್ದ ಅಧ್ಯಾಪಕರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಪುತ್ರಿ ವರಾಂಡದಿಂದ ನಾಪತ್ತೆಯಾದ ಬಗ್ಗೆ ಅಧ್ಯಾಪಕನಾದ ತಂದೆಗೆ ತಿಳಿದುಬಂದಿದೆ. ಎಲ್ಲರೂ ಸೇರಿ ಪಾಯಿಖಾನೆಯ ಬಳಿಗೆ ತಲುಪಿ ಬಾಗಿಲು ತೆರೆಯುವಂತೆ ತಿಳಿಸಿದ್ದಾರೆ. ಆದರೆ ಅದಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಬಾಗಿಲು ಮೆಟ್ಟಿ ಮುರಿಯಲಾಯಿತು. ಜನರನ್ನು ಕಂಡೊಡನೆ ಸಿದ್ದಿನಕ್ ಹೊರ ಕ್ಕೋಡಿದನು. ಈವೇಳೆ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿದೆ ತಲುಪಿದ್ದರು. ಎಲ್ಲರೂ ಸೇರಿ ಸಿದ್ದಿಕ್‌ನ್ನು ಬೆನ್ನಟ್ಟಿ ಸೆರೆಹಿಡಿದು ಸರಿಯಾದ ಶಾಸ್ತಿ ನೀಡಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದರು”.

ಹಾಡಹಗಲೇ ಬೆಚ್ಚಿಬೀಳಿಸುವ ಘಟನೆ ಅರಿತು ನೂರಾರು ಮಂದಿ ಬದಿಯಡ್ಕ ಪೊಲೀಸ್ ಠಾಣೆ ಮುಂದೆ ತಲುಪಿದರು. ಆರೋಪಿ ಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆಯೆಂದು ತಿಳಿದು ಮತ್ತಷ್ಟು ಮಂದಿ ಅಲ್ಲಿಗೆ ತಲುಪಿದರು.  ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಜನರು ಮರಳಿದರು.

NO COMMENTS

LEAVE A REPLY