ಆರ್.ಎಸ್.ಎಸ್. ಕಾರ್ಯಕರ್ತ ನಿಧನ

0
586

ಬದಿಯಡ್ಕ: ಪೆರಡಾಲ ಪಂಜತ್ತಡ್ಕ ನಿವಾಸಿ ಕುಂಞಿರಾಮ ಟೈಲರ್(೮೧) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತ ನಾದ ಇವರು ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ಬದಿಯಡ್ಕದ ಸುಂದರಪ್ರಭು ಸಹಿತ ಹಲವರು ಹೋರಾಟಗಾರರ ಜತೆ ೬ ತಿಂಗಳ ಕಾಲ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಸೆರೆ ಮನೆ ವಾಸ ಅನುಭವಿಸಿದ್ದರು. ಬದಿಯಡ್ಕ ಪೇಟೆಯಲ್ಲಿ ಹಲವು ವರ್ಷಗಳ  ಕಾಲ ಟೈಲರ್ ಆಗಿದ್ದರು.

ಮೃತರು ಪತ್ನಿ ಓಮನ, ಮಕ್ಕಳಾದ ರಾಜೇಶ್, ಅನಿಲ್, ರಾಧಾ, ಸುಜಾತ, ಅಳಿಯ-ಸೊಸೆಯಂದಿರಾದ ರತ್ನಾಕರ, ಅರವಿಂದ, ಶುಭ, ಸುಮ, ಸಹೋದರ-ಸಹೋದರಿಯರಾದ ಬಾಬು, ಲಕ್ಷ್ಮಿ, ಕಲ್ಯಾಣಿ, ರತ್ನಾವತಿ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY