ರೈಲು ಢಿಕ್ಕಿ ಹೊಡೆದು ಗೇಟ್ ಕೀಪರ್ ಸಾವು

0
620

ಕಾಸರಗೋಡು: ಕರ್ತವ್ಯ ನಿರ್ವಹಿಸುತ್ತಿರುವೆಡೆಯಲ್ಲಿ ರೈಲು ಢಿಕ್ಕಿ ಹೊಡೆದು ರೈಲ್ವೇ ಗೇಟ್ ಕೀಪರ್ ಸಾವನ್ನಪ್ಪಿದ ದಾರುಣ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಕೂಡ್ಲು ರಾಮದಾಸನಗರದ ದಿ| ಕೊರಗರ ಪುತ್ರ ಕೆ. ಗಂಗಾಧರ (೪೯) ಮೃತ್ಯುಗೀಡಾದ ದುರ್ದೈವಿ. ಕಾಸರಗೋಡು ಪಳ್ಳ ಗೇಟಿನಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವೆಡೆಯಲ್ಲಿ ಇವರಿಗೆ ರೈಲು ಢಿಕ್ಕಿ ಹೊಡೆದಿತ್ತು.

ಸದರ್ನ್ ರೈಲ್ವೇ ಮಜ್ದೂರ್ ಯೂನಿಯನ್‌ನ ಕಾಸರಗೋಡು ಯೂನಿಟ್ ಅಧ್ಯಕ್ಷರಾದ ಗಂಗಾಧರ ಅವರು ತಾಯಿ ಕಾರ್ತ್ಯಾಯಿನಿ, ಪತ್ನಿ ನಿರ್ಮಲಾ, ಮಕ್ಕಳಾದ ಅಮಿತಾ, ಹೃಷಿಕೇಶ್, ಸಹೋದರ ಮನೋಹರ, ಸಹೋದರಿಯರಾದ ಜಯಲಕ್ಷ್ಮಿ, ಸರೋಜಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY