ಕೊಠಡಿಗೆ ಬೀಗ ಜಡಿದು ಜಿಲ್ಲಾ ಬ್ಯಾಂಕ್ ಆಡಿಟರ್ಗೆ ತಡೆ: ಪೊಲೀಸ್, ರಿಜಿಸ್ಟ್ರಾರ್ಗೆ ದೂರು

0
43

ಕಾಸರಗೋಡು: ಕರ್ತವ್ಯ ನಿರ್ವಹಣೆಗಾಗಿ ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಕಂಕರೆಂಟ್ ಆಡಿಟರ್ ಬಂದಾಗ ಅವರ ಕೊಠಡಿಗೆ ಬೀಗ ಜಡಿದು ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ತಂದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೆ. ಸುರೇಂದ್ರನ್ ಎಂಬವರು ದೂರು ನೀಡಿದ ಅಧಿಕಾರಿಯಾ ಗಿದ್ದಾರೆ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ಕಂಕರೆಂಟ್ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುರೇಂದ್ರನ್ ರನ್ನು ಕಳೆದ ದಶಂಬರ ೩೧ರಂದು ಇಲ್ಲಿಂದ ಇಡುಕ್ಕಿ ಜಿಲ್ಲಾ ಸಹಕಾರಿ ಬ್ಯಾಂಕ್ ಗೆ ವರ್ಗಾಯಿಸಿ ಅದರ ಬದಲು ಪಾಲ್ಘಾಟ್‌ನ ಸುಮೇಶ್ ಎಂಬವರನ್ನು ಆ ಸ್ಥಾನಕ್ಕೆ  ನೇಮಿಸಲಾಗಿತ್ತು. ಆ ವರ್ಗಾವಣೆ ವಿರುದ್ಧ ಸುರೇಂದ್ರನ್ ಕೇರಳ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್‌ಗೆ ದೂರು ನೀಡಿದ್ದರು. ಅದನ್ನು ಪರಿಶೀಲಿಸಿದ ಟ್ರಿಬ್ಯೂನಲ್ ವರ್ಗಾವಣೆಗೆ ಒಂದು ತಿಂಗಳ ತಡೆಯಾಜ್ಞೆ ಹೊರಡಿಸಿತ್ತು. ಅದರಂತೆ ಸುರೇಂದ್ರನ್ ಮತ್ತೆ ಕೆಲಸಕ್ಕೆ ಸೇರ್ಪಡೆಗೊಳ್ಳಲು ನಿನ್ನೆ ಬೆಳಿಗ್ಗೆ ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್‌ನ ತನ್ನ ಕೊಠಡಿಗೆ ಬಂದಾಗ ಅದರ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಆ ಬಗ್ಗೆ ಸುರೇಂದ್ರನ್ ಪ್ರಶ್ನಿಸಿದಾಗ ಹೊಸ ಆಡಿಟರ್ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆಂದೂ, ಆ ಹಿನ್ನೆಲೆಯಲ್ಲಿ ನೀವು ಕೆಲಸಕ್ಕೆ ಬರುವ ಅಗತ್ಯವಿಲ್ಲವೆಂಬ ಉತ್ತರ ಬ್ಯಾಂಕ್ ಅಧಿಕೃತರಿಂದ ಅವರಿಗೆ ಲಭಿಸಿತ್ತೆನ್ನಲಾಗಿದೆ.

ಅದರ ಹೆಸರಲ್ಲಿ ಸುರೇಂದ್ರನ್ ಪ್ರಸ್ತುತ ಬ್ಯಾಂಕ್‌ನ ಜನರಲ್ ಮೆನೇಜರ್, ಕಾಸರಗೋಡು ಪೊಲೀಸರು ಮತ್ತು ಸಹಕಾರಿ ಸಂಘ ರಿಜಿಸ್ಟ್ರಾರ್‌ಗಳಿಗೆ ದೂರು ನೀಡಿದ್ದಾರೆ. ತನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿ ತರಲಾಗಿದೆ. ಬ್ಯಾಂಕ್ ಅಧ್ಯಕ್ಷ ನೀಡಿದ ನಿರ್ದೇಶ ಪ್ರಕಾರ ತನಗೆ ತಡೆಯೊಡ್ಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

NO COMMENTS

LEAVE A REPLY