ಇಂದು ಸರಕಾರಿ ವೈದ್ಯರ ಮುಷ್ಕರ ಚಿಕಿತ್ಸೆ ಲಭಿಸದೆ ರೋಗಿಗಳು ಸಂಕಷ್ಟದಲ್ಲಿ

0
621

ಕಾಸರಗೋಡು: ಉದ್ಯೋಗ ಭಡ್ತಿ ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ಸರಕಾರಿ ಆಸ್ಪತ್ರೆಗಳ ವೈದ್ಯರು ಸಂಘಟನೆಯಾದ ಕೆಜಿಎಂಒಎ ಆಶ್ರಯದಲ್ಲಿ ವೈದ್ಯರು ಇಂದು ರಾಜ್ಯದಾದ್ಯಂತವಾಗಿ ಮುಷ್ಕರದಲ್ಲಿ ತೊಡಗಿದ್ದಾರೆ.

ಇದರಿಂದಾಗಿ ಕಾಸರಗೋಡು ಜನರಲ್ ಆಸ್ಪತ್ರೆ, ಹೊಸದುರ್ಗ ದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗಳು, ಜಿಲ್ಲೆಯ ಇತರ ಎಲ್ಲಾ ಆಸ್ಪತ್ರೆಗಳು  ಸೇರಿದಂತೆ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳ ಒ.ಪಿ(ಹೊರರೋಗ) ವಿಭಾಗದಲ್ಲಿ ವೈದ್ಯರು ಇಂದು ಹಾಜರಾಗದೆ ರೋಗಿಗಳು ತೀವ್ರ ಸಂಕಷ್ಟಕ್ಕೊಳಗಾದರು.

ಕ್ಯಾಶ್ವಲ್ ಲೀವ್ ಪಡೆದು  ರಜೆ ತೆಗೆಯುವ ಮೂಲಕ ಸರಕಾರಿ ವೈದ್ಯರು ಇಂದು  ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದಾ ರೆ.  ಆದರೆ ಆಸ್ಪತ್ರೆಗಳ ಕ್ಯಾಶ್ವಾಲಿಟಿ ತೆರೆದು ಕಾರ್ಯವೆಸಗುತ್ತಿದೆ. ಇಲ್ಲಿ ಹಾಜರು ದಾಖಲಿಸದೆ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೂರ್ವ ನಿಗದಿತ ಆಪರೇಷನ್‌ಗಳೆಲ್ಲವೂ ಇಂದು ಸರಿಯಾದ ರೀತಿಯಲ್ಲೇ ನಡೆದಿದೆ. ಆಪರೇಷನ್‌ಗೆ ಮುಷ್ಕರದಿಂದ ತೊಂದರೆಯಾಗಿಲ್ಲ. ಜನರಲ್ ಆಸ್ಪತ್ರೆಯ  ಕ್ಯಾಶ್ವಾಲಿಟಿಯಲ್ಲಿ ಓರ್ವ ಮತ್ತು ಡ್ಯೂಟಿ ಡಾಕ್ಟರ್ ಆಗಿ ಓರ್ವ ವೈದ್ಯ ಇಂದು ಸೇವೆಗೆ ಹಾಜರಾಗಿದ್ದರೂ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೆ ಸೇವೆ ನಡೆಸುತ್ತಿದ್ದಾರೆ. ಇತರ ಎಲ್ಲಾ ವೈದ್ಯರು ಇಂದು ಕ್ವಾಶ್ವಲ್ ಲೀವ್ ಮೂಲಕ ರಜೆ ಪಡೆದು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದಾಗಿ ಒ.ಪಿ ವಿಭಾಗ ತೆರೆಯದೆ ಚಿಕಿತ್ಸೆಗಾಗಿ ಬಂದ ರೋಗಿಗಳೆಲ್ಲರೂ ಚಿಕಿತ್ಸೆ ಲಭಿಸದೆ ಹಿಂತಿರುಗುವ ಸ್ಥಿತಿ ಉಂಟಾಗಿದೆ. ಇದೇ ವೇಳೆ ವೈದ್ಯರು ಇಂದು ಮುಷ್ಕರದಲ್ಲಿದ್ದರೂ,

ಅವರು ದಾಖಲಿಸಿ ಚಿಕಿತ್ಸೆ ನೀ ಡುತ್ತಿರುವ ರೋಗಿಗಳ ಆರೋಗ್ಯ ತಪಾಸಣೆಯನ್ನು ಇಂದು ಬೆಳಿಗ್ಗೆ ನಡೆಸಿದ್ದಾರೆ.

ವೈದ್ಯರ ಮುಷ್ಕರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯನಿರ್ವಹಣೆ  ಮೇಲೂ ತೀವ್ರ ಪರಿಣಾಮ ಬೀರಿದೆ. ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆ ಲಭಿಸದೆ  ಹಿಂತಿರುಗುವ ಸ್ಥಿತಿ  ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಇಂದು ಇದೇ ಸ್ಥಿತಿ ಮುಂದುವ ರಿಯುತ್ತಿದೆ.  ಆದರೆ ಸರಕಾರಿ ಆಸ್ಪತ್ರೆಗಳ ಅರವಳಿಕೆ ತಜ್ಞ ವಿಭಾಗದ ವೈದ್ಯರು ಇಂದಿನ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ.

NO COMMENTS

LEAVE A REPLY