ಸಹಸ್ರಾರು ಭಕ್ತರಿಂದ ಪುಣ್ಯ ಸಮುದ್ರ ಸ್ನಾನ

0
683

ಕುಂಬಳೆ: ಸೋಣ ತಿಂಗಳ ಅಮ ವಾಸ್ಯೆಯಾದ ಇಂದು ಸಹಸ್ರಾರು ಮಂ ದಿ ಭಕ್ತಿ ಪೂರ್ವಕ ಸಮುದ್ರ ಸ್ನಾನ ಗೈದು ಪುನೀತರಾದರು. ತುಳುನಾಡಿನ ಸಂಪ್ರದಾಯದಂತೆ ಸೋಣ(ಶ್ರಾವಣ) ತಿಂಗಳಲ್ಲಿ ಬರುವ ಅಮವಾಸ್ಯೆಯಂದು ಪವಿತ್ರ ಸಮುದ್ರ ಸ್ನಾನ ನಡೆಯುತ್ತಿದೆ. ಹೊಸಬೆಟ್ಟು, ಕಣ್ವತೀರ್ಥ, ಮಂಜೇ ಶ್ವರ, ಉಪ್ಪಳ, ಐಲ, ಕುಂಬಳೆ, ನೆಲ್ಲಿ ಕುಂಜೆ, ತೃಕ್ಕ ನ್ನಾಡು ಮುಂತಾದೆಡೆಗಳ ಕಡಲ ತೀರಗಳಲ್ಲಿ ಇಂದು ಮುಂಜಾನೆ ಯಿಂದಲೇ ಸಮುದ್ರ ಪುಣ್ಯಸ್ನಾನ ಆರಂಭ ಗೊಂಡಿತು. ಪುತ್ತೂರು, ವಿಟ್ಲ, ಮುಡಿಪು, ಸಾಲೆತ್ತೂರು, ಬಾಕ್ರಬೈಲು, ಮೀ ಯಪದವು ಇತ್ಯಾದಿ ಪ್ರದೇಶದ ಜನರು ಹೊಸಬೆಟ್ಟು, ಮಂಜೇಶ್ವರ ಚರ್ಚ್ ಬೀಚ್ನಲ್ಲಿ ಸಮುದ್ರ ಸ್ನಾನಗೈ ದರು. ಕನ್ಯಾನ, ಬಾಯಾರು ಇತ್ಯಾದಿ ಪ್ರದೇಶಗಳಿಂದ ಆಗಮಿಸಿ ದವರು ಐಲ, ಉಪ್ಪಳ ಸಮುದ್ರದಲ್ಲಿ ಸ್ನಾನ ಗೈದರು. ಐಲ ಶಿವಾಜಿ ನಗರ ಸಮುದ್ರ ತೀರದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ತೀರ್ಥಸ್ನಾನಗೈದರು. ಈ ಪ್ರದೇಶದಲ್ಲಿ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಶಾರದೋತ್ಸವ ಸಮಿತಿ, ಶಿವಾಜಿ ಫ್ರೆಂ ಡ್ಸ್ ಕ್ಲಬ್, ಆರ್.ಎಸ್. ಎಸ್ ಶಿವಾಜಿ ನಗರ ಶಾಖೆ ಮುಂತಾದ ಸಂಘ ಸಂಸ್ಥೆಗಳ ವತಿಯಿಂದ ಅಲಂ ಕಾರ ನಡೆಸಲಾಗಿತ್ತು. ಪೆರ್ಲ, ಬದಿಯಡ್ಕ, ಮುಳ್ಳೇರಿಯ, ಪುತ್ತಿಗೆ ಮುಂತಾದ ಪ್ರದೇಶಗಳ ಭಕ್ತರು ಕುಂಬಳೆಯಲ್ಲೂ, ಸುಳ್ಯ, ಅಡರು, ಮುಳಿಯಾರು ಇತ್ಯಾದಿ ಪ್ರದೇಶಗಳ ಭಕ್ತರು ನೆಲ್ಲಿಕುಂಜೆ ಕಡಲ ಕಿನಾರೆಯಲ್ಲಿ ತೀರ್ಥ ಸ್ನಾನಗೈದರು. ಈ ಎಲ್ಲಾ ಪ್ರದೇಶಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವೈದಿಕರು ಸಮುದ್ರ ಪೂಜೆಗೈದ ಬಳಿಕ ತೀರ್ಥಸ್ನಾನ ಆರಂಭಗೊಂಡಿತು. ಎಲ್ಲೆಡೆ ಪೊಲೀಸರ ಸಹಿತ ಸ್ಥಳೀಯ ಸಂಘ-ಸಂಸ್ಥೆಗಳ ಯುವ ಸದಸ್ಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

NO COMMENTS

LEAVE A REPLY