ದಲಿತ ಯುವತಿಗೆ ಲೈಂಗಿಕ ಕಿರುಕುಳ:ಆರೋಪಿ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ

0
56

ಮಂಜೇಶ್ವರ: ಮದುವೆಯಾಗುವುದಾಗಿ ನಂಬಿಸಿ ದಲಿತ ವಿಭಾಗಕ್ಕೆ ಸೇರಿದ ೨೪ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ವಂಚನೆಗೈದ ಪ್ರಕರಣದ ಆರೋಪಿಯನ್ನು ಆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ರ ನ್ಯಾಯಾಲಯ (ಪ್ರಥಮ) ಕಾಸರಗೋಡು ಎಸ್.ಎಂ. ಎಸ್ ಡಿವೈಎಸ್ಪಿಯವರ ಕಸ್ಟಡಿಗೆ ಒಂದು ದಿನದ ತನಕ ನಿನ್ನೆ ಬಿಟ್ಟುಕೊಟ್ಟಿದೆ.

ಮಂಜೇಶ್ವರಕ್ಕೆ ಸಮೀಪದ ಕಡಂಬಾರು ಮಜಿಬೈಲು ನಿವಾಸಿ ಬ್ರಿಜೇಶ್(೩೧)ನನ್ನು ನ್ಯಾಯಾಂಗ ಬಂಧನದಿಂದ ಡಿವೈಎಸ್ಪಿ ಯವರ ಕಸ್ಟಡಿಗೆ ಬಿಟ್ಟುಕೊಡಲಾಗಿದೆ.

ಕಣ್ವತೀರ್ಥ ಪರಿಸರದ ದಲಿತ ವಿಭಾಗಕ್ಕೆ ಸೇರಿದ ೨೪ರ ಹರೆಯದ  ಯುವತಿಯನ್ನು ಮದುವೆಯಾಗು ವುದಾಗಿ ನಂಬಿಸಿ ಆಕೆಯನ್ನು ಮಂಗಳೂರಿನ ವಸತಿಗೃಹವೊಂದಕ್ಕೆ ಕರೆದೊಯ್ದು  ಲೈಂಗಿಕ ಕಿರುಕುಳ ನೀಡಿ,  ೨೦೧೬ ಎಪ್ರಿಲ್‌ನಲ್ಲಿ ಮಂಜೇಶ್ವರದಲ್ಲಿ ಆಕೆಯ ಮೇಲೆ ಹಲ್ಲೆ  ನಡೆಸಿದ ಆರೋಪದಂತೆ ಆಕೆ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು. ಬಳಿಕ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಬಳಿಕ ಎಸ್.ಎಂ. ಎಸ್. ವಿಭಾಗಕ್ಕೆ ಹಸ್ತಾಂv ರಿಸಲಾಗಿತ್ತು. ಈ ಮಧ್ಯೆ ಪ್ರಸ್ತುತ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ತಮ್ಮ ಕಸ್ಟಡಿಗೆ ನೀಡಬೇಕೆಂದು ಎಸ್.ಎಂ.ಎಸ್. ಡಿವೈಎಸ್ಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಯನ್ನು ಒಂದು ದಿನದ ತನಕ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ.

NO COMMENTS

LEAVE A REPLY