ನಾಳೆ ಹಸೆಮಣೆಗೇರಲಿದ್ದ ಯುವತಿ ಆತ್ಮಹತ್ಯೆ

0
54

ಕಾಸರಗೋಡು: ಜಿಲ್ಲೆಯ ನಿವಾಸಿಯಾದ ಯುವಕನೊಂದಿಗೆ ನಾಳೆ ವಿವಾಹ ನಡೆಯಲಿದ್ದು ಯುವತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಮಂಗಳೂರು ನಾಗುರಿ ನಿವಾಸಿ ಕೃಷ್ಣ ಎಂಬವರ ಪುತ್ರಿ ನಂದಿತಾ(೨೬) ಆತ್ಮಹತ್ಯೆಗೈದ ಯುವತಿ. ಇವರ ವಿವಾಹ ಕಾಸರಗೋಡು ನಿವಾಸಿಯಾ ದ ಚಂದ್ರಶೇಖರ ಎಂಬವರ ಜೊತೆ ನಾಳೆ  ನಡೆಸಲು ನಿಶ್ಚ ಯಿಸಲಾಗಿದ್ದು ಇದರ ಪೂರ್ವಭಾವಿಯಾಗಿ ಗುರುವಾರ ಯುವತಿಯ ಮನೆಯವರು ಚಂದ್ರ ಶೇಖರನ ಮನೆಗೆ ತಲುಪಿದ್ದರು. ಬಳಿಕ ಹಿಂತಿರುಗಿದಾಗ ಮನೆಯಲ್ಲಿ ನಂದಿತ ನೇಣುಬಿಗಿದು ಮೃತಪಟ್ಟಿರುವುದನ್ನು ಪತ್ತೆಹಚ್ಚಲಾಗಿದೆ.

ತಂದೆ, ತಾಯಿ, ಸಹೋದರರು ಕಾಸರಗೋಡಿಗೆ ತಲುಪಿದ್ದ ವೇಳೆ ಈಕೆ ಮನೆಯಲ್ಲಿ ನೇಣು ಬಿಗಿದಿರಬೇಕೆಂದು ಶಂಕಿಸಲಾಗಿದೆ. ನಂದಿತಾರ ಸಾವಿನ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿ ಹೆತ್ತವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಂದಿತಾರ ಮೊಬೈಲ್ ಫೋನ್‌ನನ್ನು ಪೊಲೀಸರು ಪಡೆದುಕೊಂಡಿದ್ದಾರೆ. ನಾಳೆ ಚಂದ್ರಶೇಖರನ್ ಹಾಗೂ ಸಂಬಂಧಿಕರನ್ನು ಮಂಗಳೂರು ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದಾರೆ.

NO COMMENTS

LEAVE A REPLY