ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘದ 45ನೇ ಭಜನೋತ್ಸವ 29ರಂದು

ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 45 ವರ್ಷಗಳಿಂದ ಪ್ರತೀ ಶುಕ್ರವಾರ ಮತ್ತು ಪರ್ವದಿನಗಳಲ್ಲಿ ಭಜನಾ ಸೇವೆ ಮಾಡುತ್ತಿರುವ ಐಲ ಶ್ರೀ ದುರ್ಗಾ ಪರಮೇಶ್ವರೀ ಕಲಾಸಂಘದ ನೇತೃತ್ವದಲ್ಲಿ ವಿವಿಧ ಭಜನಾ ತಂಡಗಳ ಸಹಕಾರ ದಿಂದ ಪ್ರತೀ ವರ್ಷ ನಡೆಸಿ ಕೊಂಡು ಬರುತ್ತಿರುವ ಭಜನೋತ್ಸವ ಕಾರ್ಯ ಕ್ರಮ ಈ ತಿಂಗಳ 29ರಂದು ಸೂರ್ಯೋದ ಯದಿಂದ ಸೂರ್ಯಾ ಸ್ತಮಾನದ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಬೆಳಿಗ್ಗೆ 6.30ಕ್ಕೆ ಕ್ಷೇತ್ರದ ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ಮಾಜಿ ಮೊಕ್ತೇಸರ ತಿಮ್ಮಪ್ಪ ಭಂಡಾರಿ ಬೊಳುವಾಯಿ ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡುವರು.

Leave a Reply

Your email address will not be published. Required fields are marked *

You cannot copy content of this page